ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ ಎಂಟು ಸಾವಿರ ಗಡಿಯಲ್ಲಿದ್ದ ಹೊಸ ಪ್ರಕರಣಗಳು ಇಂದು ಒಂಭತ್ತು ಸಾವಿರ ಗಡಿ ತಲುಪಿದೆ.
ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 8,818 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 2,19,926ಕ್ಕೆ ಏರಿಕೆಯಾಗಿದೆ. ಇನ್ನೂ, ಕೊರೊನಾದಿಂದಾಗಿ 114 ಮಂದಿ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 3,821 ಕ್ಕೆ ಏರಿಕೆಯಾಗಿದೆ. ಇನ್ನೂ, 82,958 ಸಕ್ರಿಯ ಪ್ರಕರಣಗಳು ಇವೆ.
ರಾಜಧಾನಿಯಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ನಿನ್ನೆ 2,452 ಹೊಸ ಪ್ರಕರಣ ದಾಖಲಾಗಿತ್ತು. ಇಂದು 3,495 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 87,680 ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ 35 ಜನ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 1,395ಕ್ಕೇರಿದೆ. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ 2,034 ಮಂದಿ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 34,860 ಕ್ಕಿಳಿದಿದೆ.
ಇಂದು ಚೇತರಿಕೆ ಕಂಡವರ ಸಂಖ್ಯೆ ಅಧಿಕವಾಗಿದ್ದು, 6,629 ಮಂದಿ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಳೆಗಾಲದಲ್ಲಿ ಮಕ್ಕಳ ಆರೈಕೆ ಹೀಗಿರಲಿ..
ಎಸ್ ಪಿ ಬಿ ಆರೋಗ್ಯ ಸ್ಥಿತಿ ಸ್ಥಿರ ; ವಿಡಿಯೋ ಮೂಲಕ ಮಾಹಿತಿ ನೀಡಿದ ಬಾಲಸುಬ್ರಹ್ಮಣ್ಯಂ ಪುತ್ರ
ಧೋನಿ ನಿವೃತ್ತಿ : ಸಚಿನ್ ಭಾವನಾತ್ಮಕ ಟ್ವೀಟ್
ಧೋನಿ ಬೆನ್ನಲ್ಲೇ ರೈನಾ ಕೂಡ ನಿವೃತ್ತಿ ..!
ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ.. ಸಾಂಸ್ಕೃತಿಕ ನಗರಿಯ ಸುಬ್ಬರಾಯನ ಕೆರೆಯ ಇತಿಹಾಸ..
‘ಅಧೀರ’ ಸಂಜಯ್ ದತ್ ಬಿಟ್ಟು ಶೂಟಿಂಗ್ ಅಖಾಡಕ್ಕೆ ‘ಕೆಜಿಎಫ್’ ಟೀಮ್ ..!