ರಾಜ್ಯದಲ್ಲಿ‌ 9 ಲಕ್ಷ ದಾಟಿದ ಕೊರೊನಾ ಕೇಸ್..!

Date:

ರಾಜ್ಯದಲ್ಲಿ‌ 9 ಲಕ್ಷ ದಾಟಿದ ಕೊರೊನಾ ಕೇಸ್..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬಂದಿದ್ದರೂ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಇಂದಿಗೂ ಒಂದು ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಲೇ ಇವೆ.
ಶನಿವಾರ ಕೂಡ ರಾಜ್ಯದಲ್ಲಿ 1,203 ಹೊಸ ಪ್ರಕರಣಗಳು ದೃಢ ಪಟ್ಟಿದ್ದು, ಇಲ್ಲಿಯವರೆಗೆ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 9,00,214 ಕ್ಕೆ ಏರಿಕೆಯಾಗಿದೆ. ಆದರೆ ಇದೇ ವೇಳೆ 1,531 ಸೋಂಕಿತರು ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 8,70,002ಕ್ಕೆ ಏರಿದೆ.
ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 11 ಜನರು ಸೋಂಕಿನಿಂದ ಸಾವನ್ನಪ್ಪಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 11,939ಕ್ಕೆ ಏರಿಕೆಯಾಗಿದ್ದು, 12 ಸಾವಿರದ ಅಂಚಿಗೆ ತಲುಪಿದೆ.
24 ಗಂಟೆಗಳ ಅವಧಿಯಲ್ಲಿ 1,02,229 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪಾಸಿಟಿವ್‌ ಪ್ರಕರಣ ಪ್ರಮಾಣ ಶೇ.1.17 ಇದೆ. ಸಾವಿಗೀಡಾದವರ ಪ್ರಮಾಣ ಶೇ. 0.91ರಷ್ಟಿದೆ.
ಸದ್ಯ ರಾಜ್ಯದಲ್ಲಿ 18,254 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇವರಲ್ಲಿ 244 ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಷಾರ್, ವಿಡಿಯೋ ಕಾಲ್ ಮಾಡಿ , ‘ ಆ’ ವಿಡಿಯೋ ಕಳುಹಿಸಿ ಬ್ಲಾಕ್ಮೇಲ್ ಮಾಡ್ತಾರೆ..!

ಸಾರ್ವಜನಿಕರನ್ನು ಸುಲಿಗೆ ಮಾಡಲು ಸೈಬರ್‌ ಖದೀಮರು ಹೊಸದಾ ತಂತ್ರವೊಂದನ್ನು ಕಂಡುಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕಾಲ್‌ ಮಾಡಿ, ಅಶ್ಲೀಲ ವಿಡಿಯೊಗಳನ್ನು ಹಾಕಿ, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಈ ರೀತಿಯ ಬ್ಲ್ಯಾಕ್‌ಮೇಲ್‌ ಕರೆಗಳು ಹಲವರಿಗೆ ಬಂದಿವೆ. ಬೆಂಗಳೂರು ನಗರದ ಇನ್ಸ್‌ಪೆಕ್ಟರ್‌ವೊಬ್ಬರು ಸೈಬರ್‌ ಕ್ರೈಂ (ಸಿಇಎನ್‌) ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್‌ ಸಿ.ದಯಾನಂದ ಎಂಬುವರಿಗೆ ಡಿ.8ರಂದು ರಾತ್ರಿ 8.30ರ ಸುಮಾರಿಗೆ ಅಪರಿಚಿತ ಫೋನ್‌ ನಂಬರ್‌ನಿಂದ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಾಲ್‌ ಬಂದಿದ್ದು, ಸ್ವೀಕರಿಸಿದ್ದಾರೆ. ಕೂಡಲೇ ಅದರಲ್ಲಿ ಮಹಿಳೆಯ ಅಶ್ಲೀಲ ವಿಡಿಯೊ ಬಂದಿದೆ. ಗಾಬರಿಗೊಂಡ ಇನ್ಸ್‌ಪೆಕ್ಟರ್‌ ಫೋನ್‌ ಕಟ್‌ ಮಾಡಿದ್ದಾರೆ. ಯಾರಿದು ಎಂದು ತಲೆಕೆಡಿಸಿಕೊಳ್ಳುವಷ್ಟರಲ್ಲಿ ಆ ವಿಡಿಯೊದ ಸ್ಕ್ರೀನ್‌ಶಾಟ್‌ ತೆಗೆದು ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸಲಾಗಿದೆ.
11 ಸಾವಿರ ರೂ. ಹಣ ನೀಡದಿದ್ದರೆ ನಿನ್ನ ಫೇಸ್‌ಬುಕ್‌ ಸ್ನೇಹಿತರಿಗೆ ಕಳುಹಿಸುತ್ತೇನೆಂದು ಬೆದರಿಸಿದ್ದಾರೆ. ಆನ್‌ಲೈನ್‌ ಖದೀಮರ ಕೆಲಸ ಎಂದು ಅರಿತ ದಯಾನಂದ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ನಲ್ಲಿ ಮೊಬೈಲ್‌ ಫೋನ್‌ ಸ್ಕ್ರೀನ್‌ ಮೇಲೆ ನಮ್ಮೊಂದಿಗೆ ಮಾತನಾಡುತ್ತಿರುವವರ ವಿಡಿಯೊ ಜೊತೆಗೆ ನಮ್ಮ ವಿಡಿಯೊ ಕೂಡ ನಮಗೆ ಕಾಣಿಸುತ್ತದೆ. ಖದೀಮರು, ಆ ಕಡೆಯಿಂದ ಅಶ್ಲೀಲ ವಿಡಿಯೊವನ್ನು ವಿಡಿಯೊ ಕಾಲ್‌ ವೇಳೆ ಪ್ಲೇ ಮಾಡುತ್ತಾರೆ. ಕರೆ ಸ್ವೀಕರಿಸಿದಾಗ ಸಹಜವಾಗಿ ಖದೀಮರ ಮೊಬೈಲ್‌ನಲ್ಲಿ ನಮ್ಮ ವಿಡಿಯೊ ಇರುತ್ತದೆ.
ಅಶ್ಲೀಲ ವಿಡಿಯೊ ಜತೆಗೆ ನಮ್ಮ ವಿಡಿಯೊ ಇರುವ ಕಾರಣ ಅದನ್ನೇ ಸ್ಕ್ರೀನ್‌ ಶಾಟ್‌ ತೆಗೆದುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಾರೆನ್ನಲಾಗಿದೆ. ಅಪರಿಚಿತರು ವಿಡಿಯೊ ಕಾಲ್‌ ಮಾಡಿದರೆ, ಕರೆ ಸ್ವೀಕರಿಸುವ ಮೊದಲು ಸಾರ್ವಜನಿಕರು ಎಚ್ಚರದಿಂದ ಇರಬೇಕೆಂದು ಪೊಲೀಸರು ಸಲಹೆ ನೀಡಿದ್ದಾರೆ.
ಹಿರಿಯ ಐಎಎಸ್‌ ಅಧಿಕಾರಿ ಅಂಜುಂ ಪರ್ವೇಜ್‌ ಅವರ ಫೇಸ್‌ಬುಕ್‌ ಖಾತೆಯಿಂದ ಫೋಟೋ ಎತ್ತಿಕೊಂಡ ಖದೀಮರು, ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ವಂಚಿಸಲು ಯತ್ನಿಸಿದ್ದಾರೆ. ಈ ಕುರಿತು ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿರುವ ಅಂಜುಂ ಪರ್ವೇಜ್‌ ಅವರು, ಅಪರಿಚತರು ನನ್ನ ಫೋಟೊ ಎತ್ತಿಕೊಂಡು ನಕಲಿ ಖಾತೆ ಸೃಷ್ಟಿಸಿ, ನನ್ನ ಫೇಸ್‌ಬುಕ್‌ ಫ್ರೆಂಡ್ಸ್‌ಗಳಿಗೆ ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿದ್ದಾರೆ. ಸ್ನೇಹಿತರಾದವರಿಗೆ ಮೆಸೆಂಜರ್‌ ಮೂಲಕ ತುರ್ತಾಗಿ ಹಣದ ಅಗತ್ಯವಿದೆ ಎಂದು ಸಂದೇಶ ಕಳುಹಿಸಿ ಮೋಸ ಮಾಡಲು ಯತ್ನಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.

 

Share post:

Subscribe

spot_imgspot_img

Popular

More like this
Related

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...