ಬೆಂಗಳೂರು: ಮದ್ಯಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರಿನಲ್ಲಿ ಇಂದಿನಿಂದ 5 ದಿನ
ಬಾರ್ ಗಳು ಕ್ಲೋಸ್ ಆಗಲಿದೆ. ಎಂಎಲ್‌ಸಿ ಚುನಾವಣೆ ಹಾಗೂ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ನಗರದಲ್ಲಿ ಜೂನ್ 1ರಿಂದ ಸಂಜೆಯಿಂದ ಜೂನ್ 6ರವರೆಗೆ ಬಾರ್ಗಳು ಬಂದ್ ಆಗಲಿವೆ. ವೀಕೆಂಡ್ನಲ್ಲೇ ಬಾರ್ ಅಂಗಡಿಗಳು ಬಾಗಿಲು ಹಾಕುತ್ತಿರುವುದರಿಂದ ಮದ್ಯ ಪ್ರಿಯರಿಗೆ ಬರ ಎದುರಾಗಿದೆ.
ಜೂನ್ 3ರಂದು ಪದವೀಧರರ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹೀಗಾಗಿ ಜೂನ್ 1ರ ಸಂಜೆ 4 ಗಂಟೆಯಿಂದ ಜೂನ್ 3ರವರೆಗೆ ಬಾರ್‌ಗಳು ಕ್ಲೋಸ್ ಇರಲಿವೆ. ಜೂನ್ 4ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಇದ್ದು, ಅಂದು ಸಹಾ ಎಣ್ಣೆ ಸಿಗಲ್ಲ.. ಕಿಕ್ ಏರಿಸುವಂತಿಲ್ಲ.. ಇನ್ನು ಜೂನ್ 5ಅಂದ್ರೆ.. ಬುಧವಾರ ಬಾರ್‌ಗಳು ಎಂದಿನಂತೆ ಓಪನ್ ಇರುತ್ತವೆ. ಆದ್ರೆ ಜೂನ್ 6 ರಂದು ಎಂಎಲ್‌ಸಿ ಮತ ಎಣಿಕೆ ಇರೋದ್ರಿಂದ ಅಂದು ಮತ್ತೆ ಬಾರ್ ಕ್ಲೋಸ್ ಆಗಲಿವೆ.
ಬೆಂಗಳೂರಿನಲ್ಲಿ ಪದವಿ ಕ್ಷೇತ್ರ ಚುನಾವಣೆಗೆ 36 ಸಾವಿರದಷ್ಟು ಮಾತ್ರ ಮತದಾರರಿದ್ದಾರೆ. ಆದ್ರೆ 5 ದಿನ ಬಾರ್ ಬಂದ್ ಮಾಡುವುದರಿಂದ ಹೊಡೆತ ಬೀಳಲಿದೆ ಎಂದು ಬಾರ್ ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಇಂದಿನಿಂದ ಜೂನ್ 6ರವರೆಗೆ ಮದ್ಯ ಮಾರಾಟ ಬಂದ್.!
Date: