No menu items!
32.4 C
Munich
Friday, August 14, 2026

40% ಕಮಿಷನ್ ಆರೋಪ: ಸಿಎಂ ಸಿದ್ದರಾಮಯ್ಯ, ಡಿಕೆಶಿಗೆ ಜಾಮೀನು

Must read

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ʼಗೆ ಜಾಮೀನು ಮಂಜೂರಾಗಿದೆ. ಹೌದು ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿ ಕಾಂಗ್ರೆಸ್ ಜಾಹೀರಾತು ಪ್ರಕಟಿಸಿತ್ತು. ಹೀಗಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ಬಿಜೆಪಿ ಕೇಸಿನ ಹಿನ್ನೆಲೆ ಇಂದು ಸಿಎಂ ಮತ್ತು ಡಿಸಿಎಂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಬಿಜೆಪಿ ಸರ್ಕಾರದ ಮೇಲೆ ಚುನಾವಣೆ ಸಮಯದಲ್ಲಿ ಮಾಡಿದ್ದ ಭ್ರಷ್ಟಾಚಾರ ಆರೋಪವನ್ನು ಆಗ ಕಾಂಗ್ರೆಸ್ ಮಾಡಿತ್ತು. ಕಾಂಗ್ರೆಸ್ ವಿರುದ್ಧ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೇಶವ್ ಪ್ರಸಾದ್ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸಿಎಂ, ಡಿಸಿಎಂಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿ ಆಗಿತ್ತು.
ಕೋರ್ಟ್‌ಗೆ ಬಂದ ಸಿಎಂ, ಡಿಸಿಎಂ ಅವರನ್ನು ಸರ್ಕಾರಿ ಅಭಿಯೋಜಕರ ಕೊಠಡಿಯಲ್ಲಿ ಕುಳಿತುಕೊಳ್ಳಲು ಸೂಚಿಸಲಾಯಿತು. ಆದರೆ, ಬೇಡ ಇಲ್ಲೆ ಕೂರ್ತೀವಿ ಎಂದು ಇಬ್ಬರೂ ಹೇಳಿದರು. ಸಾಮಾನ್ಯರಂತೆ ನ್ಯಾಯಾಲಯದ ಹೊರಗಡೆ ಸಿಎಂ ಮತ್ತು ಡಿಸಿಎಂ ಕುಳಿತರು. ನಾಯಕರ ಪರವಾಗಿ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅಹಮ್ಮದ್ ಹಾಜರಿದ್ದರು. ಬಿಜೆಪಿ ಪರವಾಗಿ ವಕೀಲ ವಿನೋದ್ ಕುಮಾರ್ ಹಾಜರಾಗಿದ್ದರು.

- Advertisement -spot_img

More articles

- Advertisement -spot_img

Latest article