ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳನ್ನು ಸೇವಿಸಿ ಹತ್ತು ಸಾವಿರಕ್ಕೂ ಹೆಚ್ಚು ಜನ ಬಲಿಯಾದ ಕಾರಣ ಇದೀಗ ಕರ್ನಾಟಕ ರಾಜ್ಯದಾದ್ಯಂತ ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳನ್ನು ನಿಷೇಧ ಮಾಡುವ ನಿರ್ಧಾರವನ್ನು ಯಡಿಯೂರಪ್ಪನವರು ಕೈಗೊಂಡಿದ್ದಾರೆ. ಇನ್ನು ತಂಬಾಕು ಮತ್ತು ಗುಟ್ಕಾ ಉತ್ಪನ್ನದಿಂದ ಅಪಾರವಾದ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ವಿಜಯ ಸಂಕೇಶ್ವರ್ ಅವರು ಈ ಹಿಂದೆ ಇದನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದರು ಭಾರತದ ಹಲವಾರು ರಾಜ್ಯಗಳಲ್ಲಿ ಈಗಾಗಲೇ ತಂಬಾಕು ಬ್ಯಾನ್ ಆಗಿದೆ ನಮ್ಮ ರಾಜ್ಯದಲ್ಲಿಯೂ ಮಾಡಿದರೆ ತಪ್ಪೇನು ಎಂದು ಹೇಳಿಕೆ ನೀಡಿದ್ದರು.
ಇದೀಗ ಈ ಕುರಿತಾಗಿ ಗಮನ ಹರಿಸಿರುವ ಯಡಿಯೂರಪ್ಪನವರು ರಾಜ್ಯದಲ್ಲಿ ಹಂತ ಹಂತವಾಗಿ ಇದನ್ನು ಬ್ಯಾಂಕ್ ಮಾಡುವ ಚಿಂತನೆ ನಡೆಸಿದ್ದು ಅಡಿಕೆ ಬೆಳೆಗಾರರಿಗೆ ತೊಂದರೆಯಾಗದ ರೀತಿ ಮತ್ತು ತಂಬಾಕು ಬ್ಯಾನ್ ಆಗುವ ರೀತಿ ಎರಡನ್ನೂ ಸಹ ತಲೆಯಲ್ಲಿ ಇಟ್ಟುಕೊಂಡು ನಿರ್ಧಾರವನ್ನು ಕೈಗೊಳ್ಳುವುದಾಗಿ ಯಡಿಯೂರಪ್ಪನವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪನವರು ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳನ್ನು ರಾಜ್ಯದಲ್ಲಿ ನಿಷೇಧಿಸಲು ಮಾಸ್ಟರ್ ಪ್ಲಾನ್ ಹೆಣೆದಂತೆ ಕಾಣಿಸುತ್ತಿದೆ.