ಪ್ರಶ್ನೋತ್ತರ ಕಲಾಪದಲ್ಲಿ ಆರಗ ಜ್ಞಾನೇಂದ್ರ ಅವರು ಮಂಕಿ ಪಾರ್ಕ್ ಮಾಡ್ತೇವೆ ಅಂತ ಸಿಎಂ ಹೇಳಿದ್ರು ಆರು ಕೋಟಿ ಹಣ ಕೂಡ ಬಿಡುಗಡೆ ಮಾಡಿದ್ರು ಆದ್ರೆ ಇನ್ನೂ ಪಾರ್ಕ್ ನಿರ್ಮಾಣ ಆಗಲಿಲ್ಲ
ಒಂದುವರೆ ವರ್ಷದಿಂದ ಯೋಜನೆ ಜಾರಿಯಾಗಿಲ್ಲ ಈಗ ಬೇರೆಯದೇ ಕಥೆ ಹೇಳ್ತಿದ್ದಾರೆ ೨೫ಲಕ್ಷ ಖರ್ಚು ಮಾಡಿ ಸಂತಾನ ಹರಣ ಮಾಡ್ತೇವೆ ಅಂತಾರೆ ಸಂತಾನ ಹರಣ ಯಾವ ಮಂಗಕ್ಕೆ ಮಾಡ್ತಾರೆ,

ಹೆಣ್ಣು ಮಂಗಕ್ಕೋ ಗಂಡು ಮಂಗಕ್ಕೋ ಇದನ್ನು ಸರ್ಕಾರ ಸಷ್ಟ ಪಡಿಸಬೇಕು ಈ ತರಹ ಅವೈಜ್ಞಾನಿಕ ಯೋಜನೆ ಮಾಡಿದ್ರೆ ಹೇಗೆ ಸರ್ಕಾರಕ್ಕೆ ಶಾಸಕ ಅರಗ ಜ್ಙಾನೆಂದ್ರ ಪ್ರಶ್ನೆ ಪ್ರಶ್ನೆಗೆ ಸಚಿವ ಶೆಟ್ಟರ್ ಉತ್ತರ ನೀಡಿದ್ದು ಮಂಗಗಳ ಸಂತಾನ ಹರಣ ಮಾಡುತ್ತೇವೆ ಅದರ ಜೊತೆಗೆ ಮಂಕಿ ಪಾರ್ಕ್ ಕೂಡ ಮಾಡುತ್ತೇವೆ ಸಿಎಂ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಜಗದೀಶ್ ಶೆಟ್ಟರ್ ಉತ್ತರ ನೀಡಿದ್ದಾರೆ.






