ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೊನಾ ಮಹಾಬ್ಲಾಸ್ಟ್ ಆಗಿದ್ದು, 48,781 ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ.
ಇಂದು ಬರೋಬ್ಬರಿ 48,781 ಮಂದಿಗೆ ಸೋಂಕು ತಗುಲಿದ್ದು, 592 ಸೋಂಕಿತರು ಬಲಿಯಾಗಿದ್ದಾರೆ. ಬೆಂಗ
ಳೂರಿನಲ್ಲಿ ಇಂದು 21,376 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 346 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇಂದು 28,623 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18,38,885ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು 592 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 17, 804ಕ್ಕೆ ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.30.69 ಮತ್ತು ಮರಣ ಪ್ರಮಾಣ ಶೇ.1.21ರಷ್ಟಿದೆ. ರಾಜ್ಯದಲ್ಲಿ 5,36,641 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.
ಇಂದು ಒಟ್ಟು 1,58,902 ಸ್ಯಾಂಪಲ್ (ರಾಪಿಡ್ 9,0745+ಆರ್ ಟಿಪಿಸಿಆರ್ 1,48,157) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ತುಮಕೂರಿನಲ್ಲಿ ಇಂದು 3 ಸಾವಿರದ ಗಡಿ ದಾಟಿದ್ದು, ಮೈಸೂರು ಮತ್ತು ಹಾಸನದಲ್ಲಿ ಇಂದು ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 661, ಬಳ್ಳಾರಿ 1,284, ಬೆಳಗಾವಿ 965, ಬೆಂಗಳೂರು ಗ್ರಾಮಾಂತರ 959 ಬೆಂಗಳೂರು ನಗರ 21,376, ಬೀದರ್ 437, ಚಾಮರಾಜನಗರ 725, ಚಿಕ್ಕಬಳ್ಳಾಪುರ 734, ಚಿಕ್ಕಮಗಳೂರು 632, ಚಿತ್ರದುರ್ಗ 126, ದಕ್ಷಿಣ ಕನ್ನಡ 1,633, ದಾವಣಗೆರೆ 538, ಧಾರವಾಡ 942, ಗದಗ 248, ಹಾಸನ 2,422, ಹಾವೇರಿ 214, ಕಲಬುರಗಿ 1,722, ಕೊಡಗು 622, ಕೋಲಾರ 828, ಕೊಪ್ಪಳ 523, ಮಂಡ್ಯ 1,110, ಮೈಸೂರು 2,246, ರಾಯಚೂರು 762, ರಾಮನಗರ 501, ಶಿವಮೊಗ್ಗ 563, ತುಮಕೂರು 3,040, ಉಡುಪಿ 976, ಉತ್ತರ ಕನ್ನಡ 833, ವಿಜಯಪುರ 445 ಮತ್ತು ಯಾದಗಿರಿಯಲ್ಲಿ 715 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.