ಸರ್ಕಾರ ಮತ್ತು ಸಂಘಟನೆಯ ನಡುವೆ ಗೊಂದಲವಿಲ್ಲದಂತೆ ನಡೆದುಕೊಂಡು ಹೋಗುವಂತೆ ವರಿಷ್ಠರು ಬಿಎಸ್‍ವೈ ಮತ್ತು ಕರ್ನಾಟಕ ಮೂಲದ ರಾಷ್ಟ್ರೀಯ ಪ್ರಮುಖ ನಾಯಕರೊಬ್ಬರಿಗೆ ಸೂಚನೆ ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿ ದ್ದಂತೆ ಪಕ್ಷ ಮತ್ತು ಸರ್ಕಾರದಲ್ಲೂ ತಮ್ಮ ಪ್ರಭಾವ ಬೀರಲು ತೆರೆ ಮರೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೂಲಕ ಕಾರ್ಯಾಚರಣೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ರಾಜ್ಯಾಧ್ಯಕ್ಷರ ನೇಮಕಾತಿ, ಉಪ ಮುಖ್ಯಮಂತ್ರಿ ಗಳ ನೇಮಕ, ಸಚಿವ ಸಂಪುಟ ವಿಸ್ತರಣೆ, ಪದಾಧಿಕಾರಿಗಳ ನೇಮಕಾತಿ ವಿಷಯದಲ್ಲೂ ಬಿಎಸ್‍ವೈ ಅವರನ್ನು ಗುರಿಯಾಗಿಟ್ಟುಕೊಂಡೇ ನೇಮಕ ಮಾಡ ಲಾಗುತ್ತದೆ ಎಂಬ ಆಪಾದನೆಗಳು ಕೇಳಿ ಬರುತ್ತಿವೆ. ಹಾಗದರೆ ಯಡಿಯೂರಪ್ಪ ಅವರನರನು ಕೇಂದ್ರ ಕಡೆಗಣಿಸುತ್ತಿದ್ಯಾ ಎಂಬ ಮಾತು ಕೂಡ ಕೇಳಿಬರುತ್ತಿದೆ.