ರಾಜ್ಯದ ಉಳುವಿಗೆ ಕಾಂಗ್ರೆಸ್ ಕಿತ್ತೊಗೆಯಬೇಕು ಎಂದ ಸಿದ್ದರಾಮಯ್ಯ

Date:

ನಮ್ಮ ರಾಜ್ಯ ಉಳಿಯಬೇಕಾದರೆ ತಮ್ಮದೇ ಪಕ್ಷವನ್ನು ಕಿತ್ತೊಗೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಾಯಿತಪ್ಪಿನಿಂದ ನುಡಿದ ಪ್ರಸಂಗ ನಡೆದಿದೆ.

ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಕಾರ್ಯತಂತ್ರಗಳು ಹಾಗೂ ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳು, ಪಕ್ಷದ ಮುಖಂಡರ ಅಭಿಪ್ರಾಯ ಸಂಗ್ರಹ ಮುಂತಾದ ಉದ್ದೇಶಗಳೊಂದಿಗೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರ ನೇತೃತ್ವದಲ್ಲಿ ಶನಿವಾರ (ಜುಲೈ 24) ಸಭೆ ನಡೆಸಲಾಗಿತ್ತು.

ಆ ಸಭೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, “ಮಾತೆದಿದ್ದರೆ ಕೊರೊನಾ ಎಂದು ನೆಪ ಹೇಳುತ್ತಿದ್ದಾರೆ. ಕೊರೊನಾಗೆ ಅಬ್ಬಾಬ್ಬಾ ಎಂದರೆ ಐದಾರು ಸಾವಿರ ಕೋಟಿ ರೂಪಾಯಿ ಖರ್ಚು ಆಗಿರಬಹುದು. ಅಭಿವೃದ್ದಿ ಕೆಲಸಗಳು ನಡೆಯುತ್ತಲೇ ಇಲ್ಲ”ಎಂದು ಅವರು ಹೇಳಿದರು.

“ಎರಡು ವರ್ಷದಿಂದ ಒಂದು ಮನೆ ಕಟ್ಟಿಸಲು ಇವರಿಂದ ಆಗಲಿಲ್ಲ. ಅರ್ಧಬಂರ್ಧ ಯೋಜನೆಗಳಿಗೆ ಪೂರ್ಣಗೊಳಿಸಲು ಅವರಿಗೆ ದುಡ್ಡು ನೀಡಲು ಆಗಲಿಲ್ಲ. ಸುಳ್ಳು ಭರವಸೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ”ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.

“ಹಾಗಾಗಿ, ರಾಜ್ಯವನ್ನು ಉಳಿಸಬೇಕಾದರೆ, ಈ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕಾಗಿದೆ. ನಾವು ಅಧಿಕಾರಕ್ಕೆ ಬರುವುದು ಮುಖ್ಯವಲ್ಲ”ಎಂದು ಸಿದ್ದರಾಮಯ್ಯ ಹೇಳಿದರು. ಆಗ ಪಕ್ಕದಲ್ಲೇ ಇದ್ದ, ಎಸ್.ಆರ್.ಪಾಟೀಲ್ ತಪ್ಪಾಗಿರುವುದನ್ನು ಮೆಲ್ಲನೆ ಹೇಳಿದ ನಂತರ, ಕಾಂಗ್ರೆಸ್ ಪಕ್ಷವನ್ನಲ್ಲ, ಬಿಜೆಪಿಯನ್ನು ಎಂದು ಹೇಳಿದರು.

 

Share post:

Subscribe

spot_imgspot_img

Popular

More like this
Related

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....