ಮೊದಲ ಬಾರಿಗೆ ರಾಜ್ಯಪಾಲರು ಇಂದು ಮಧ್ಯಾಹ್ನ 1:30ರೊಳಗೆ ವಿಶ್ವಾಸಮತಯಾಚನೆ ಮಾಡಬೇಕೆಂದು ಆದೇಶ ನೀಡಿದ್ದರು.ಆದರೆ ಸಿಎಂ ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿ ಸಿಎಂ 1:30ರೊಳಗೆ ವಿಶ್ವಾಸಮತವನ್ನು ಯಾಚನೆ ಮಾಡಲಿಲ್ಲ. ಸದನದಲ್ಲಿ ಇಂದು ಹಾಜರಿದ್ದು ಎಲ್ಲ ಚುಟುವಟಿಕೆಗಳನ್ನು ಖುದ್ದು ರಾಜ್ಯಪಾಲರ ಪ್ರತಿನಿಧಿಗಳು ಹಾಜರಿದ್ದು, ಮಧ್ಯಾಹ್ನದ ತನಕ ನಡೆದ ಸದನದಲ್ಲಿ ನಡೆದ ವಿದ್ಯಾಮಾನಗಳನ್ನು ರಾಜ್ಯಪಾಲರಿಗೆ ತಿಳಿಸಿದ್ದಾರೆ. ಇದೇ ವೇಳೆಯಲ್ಲಿ ಇದೇ ವೇಳೆ ಮಧ್ಯಾಹ್ನ 1:30 ಆದರೂ ವೋಟ್ ಮಾತ್ರ ನಡೆಯಲೇ ಇಲ್ಲ.
ಈ ವೇಳೆ ಯಡಿಯೂರಪ್ಪನವರು ಎದ್ದು ನಿಂತು ಸ್ಪೀಕರ್ ಅವರಲ್ಲಿ ಈ ಪ್ರಕ್ರಿಯೆ ಕೂಡಲೇ ಮುಗಿಸಿಕೊಡಿ ಎಂದು ಮನವಿ ಮಾಡಿದರು. ಡಿಯೂರಪ್ಪ ಮನವಿಗೆ ಸ್ಪೀಕರ್, ನನಗೆ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದಿರುವುದು ಸಿಎಂ ಅವರಿಗೆ. ಕಲಾಪ ಹೇಗೆ ನಡೆಯಬೇಕೋ ಹಾಗೆ ನಡೆಸುತ್ತೇನೆ. ಚರ್ಚೆಯಾದ ಬಳಿಕ ಮತಕ್ಕೆ ಹಾಕಲಾಗುವುದು ಎಂದು ತಿಳಿಸಿದರು
ಸದ್ಯಕ್ಕೆ ಮಧ್ಯಾಹ್ನ 3ಕ್ಕೆ ಸದನವನ್ನು ಮುಂದೂಡಿದರು. ಇದೇ ವೇಳೆ ರಾಜ್ಯಪಾಲರು ಇಂದು ಸಂಜೆ ಸಂಜೆ 6ಕ್ಕೆ ಮತ್ತೊಂದು ಗಡುವನ್ನು ನೀಡಿದರು. ಆದರೆ ಸಂಜೆ 6ಗಂಟೆಯಾದ್ರು ಕೂಡ ಸಿಎಂ ವಿಶ್ವಾಸಮತವನ್ನುಯಾಚನೆ ಮಾಡಲೇ ಇಲ್ಲ.