ರಾಜ್ಯ ಸಂಪುಟದ 33 ಸ್ಥಾನಗಳು ಭರ್ತಿ, ಒಂದು ಮಾತ್ರ ಖಾಲಿ !?

Date:

ಸಂಪುಟ ವಿಸ್ತರಣೆಯ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಇಂದು ಪಕ್ಷೇತರರಿಬ್ಬರು ಪ್ರಮಾಣವಚನ ಸ್ವೀಕರಿಸಿದರೆ, ಕಾಂಗ್ರೆಸ್-ಜೆಡಿಎಸ್ ಆಕಾಂಕ್ಷಿಗಳು ನಿರಾಶರಾಗಿದ್ದಾರೆ.

ಒಟ್ಟು 34 ಮಂದಿಯ ಸಂಪುಟ ಗಾತ್ರದಲ್ಲಿ ಇಂದಿನ ವಿಸ್ತರಣೆಯ ಮೂಲಕ 33 ಮಂದಿಗೆ ಅವಕಾಶ ಸಿಕ್ಕಿದೆ. ಜೆಡಿಎಸ್ ಪಾಲಿನ ಇನ್ನೂ ಸ್ಥಾನ ಬಾಕಿ ಉಳಿದಿದೆ. ಬಾಕಿ ಇರುವ ಮೂರೂ ಸ್ಥಾನಗಳಿಗೂ ಸಚಿವರನ್ನು ನೇಮಿಸಬಹುದು ಎಂಬ ನಿರೀಕ್ಷೆಗಳಿದ್ದವು.

ಜೆಡಿಎಸ್ ತನ್ನ ಪಾಲಿನ ಎರಡು ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರ ಶಾಸಕ ನಾಗೇಶ್ ಅವರಿಗೆ ಕೊಟ್ಟು, ಮತ್ತೊಂದಕ್ಕೆ ಅಲ್ಪಸಂಖ್ಯಾತ ಸಮುದಾಯ ಫಾರೂಕ್ ಅಥವಾ ಇನ್ಯಾರಿಗಾದರೂ ಅವಕಾಶ ಮಾಡಿಕೊಡಲಿದೆ ಎಂಬ ಚರ್ಚೆಗಳು ನಡೆದಿದ್ದವು.ಆದರೆ ಎಲ್ಲ ಕುತೂಹಲಗಳಿಗೂ ತೆರೆ ಬಿದ್ದಿದ್ದು, ಕೇವಲ ಎರಡು ಸ್ಥಾನಗಳಿಗೆ ಮಾತ್ರ ಸಚಿವ ನೇಮಕಾತಿ ಆಗಿದೆ.

ಕಳೆದ ಆರೇಳು ತಿಂಗಳಿನಿಂದ ಸಚಿವ ಸ್ಥಾನದ ಆಕಾಂಕ್ಷಿಗಳು ಸಂಪುಟ ಸೇರಲು ಶಕ್ತಿ ಮೀರಿ ಲಾಬಿ ನಡೆಸಿದ್ದರು. ಎಲ್ಲರ ಪ್ರಯತ್ನಗಳು ವಿಫಲವಾಗಿದ್ದು, ನಿರೀಕ್ಷೆಗಳು ಹುಸಿಯಾಗಿವೆ. ನಾಳೆಯಿಂದ ರಾಜಕಾರಣ ಯಾವ ರೀತಿಯ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ಸಂಪುಟ ವಿಸ್ತರಣೆಯ ಅಸಮಾಧಾನ ನುಂಗಿಕೊಂಡು ಕಾಂಗ್ರೆಸ್-ಜೆಡಿಎಸ್‍ನ ಅತೃಪ್ತರು ಮೌನವಾಗಿರುತ್ತಾರೋ ಅಥವಾ ಬಹಿರಂಗ ಹೇಳಿಕೆಗಳನ್ನು ನೀಡಿ ಭಿನ್ನಮತೀಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Share post:

Subscribe

spot_imgspot_img

Popular

More like this
Related

ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಅನುಷ್ಠಾನಕ್ಕೆ ಸಚಿವ ಸಂಪುಟ ಒಪ್ಪಿಗೆ

ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಅನುಷ್ಠಾನಕ್ಕೆ ಸಚಿವ ಸಂಪುಟ...

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.7 ಕೆಜಿ ಹಶೀಶ್ ಸೀಜ್

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.7 ಕೆಜಿ ಹಶೀಶ್ ಸೀಜ್ದೇವನಹಳ್ಳಿ: ಕೆಂಪೇಗೌಡ...

ಹೊಸಕೋಟೆ ಸಮೀಪ ಭೀಕರ ಸರಣಿ ಅಪಘಾತ: 7 ಮಂದಿ ಸ್ಥಳದಲ್ಲೇ ಸಾವು.!

ಹೊಸಕೋಟೆ ಸಮೀಪ ಭೀಕರ ಸರಣಿ ಅಪಘಾತ: 7 ಮಂದಿ ಸ್ಥಳದಲ್ಲೇ ಸಾವು.! ಹೊಸಕೋಟೆ:...

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ಬಂಧನ

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಬೈರತಿ ಬಸವರಾಜ್ ಬಂಧನದೇವನಹಳ್ಳಿ: ಬಿಕ್ಲು...