ಇತ್ತೀಚೆಗಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಟಿ ವಿಜಯಲಕ್ಷ್ಮಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಅನಾಥೆಯಾಗಿದ್ದೇನೆ ಎಂದು ಕಣ್ಣೀರಿಟ್ಟರು. ಇಂತಹ ಪರಿಸ್ಥಿತಿಯಲ್ಲಿ ಡಾ.ರಾಜಕುಮಾರ್ ಹಾಗೂ ಪಾರ್ವತಮ್ಮ ಇದ್ದಿದ್ದರೆ ನಾನು ಇಷ್ಟೊಂದು ನೋವು ಅನುಭವಿಸಲು ಬಿಡುತ್ತಿರಲಿಲ್ಲ ಎಂದರು.
ಸುದೀಪ್ ಸರ್ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಸಹಾಯ ಮಾಡುತ್ತಿದ್ದಾರೆ. ಆದರೆ ಸುದೀಪ್ ಅವರು ಬಿಟ್ಟು ಬೇರೆ ಯಾರಿಗೂ ನನ್ನ ಮೇಲೆ ಕರುಣೆ ಬರಲಿಲ್ಲ. ನನಗೆ ಯಾಕೆ ಇಷ್ಟು ಶಿಕ್ಷೆ ಕೊಡುತ್ತಿದ್ದೀರಿ ಎಂದು ವೀಡಿಯೋದಲ್ಲಿ ಮನನೊಂದು ಮಾತನಾಡಿದರು.
ನಾನು ಈಗ ಚೇತರಿಸಿಕೊಳ್ಳುತ್ತೇನೆ, ಆದರೆ ಮೊದಲಿನಂತೆ ಕೆಲಸ ಮಾಡಲು ಕೊಂಚ ಸಮಯ ಬೇಕು. ಅಲ್ಲದೆ ನನ್ನ ಬಳಿ ಇರಲು ಮನೆಯಿಲ್ಲ. ಬಾಡಿಗೆ ಮನೆಗೆ ಅಡ್ವಾನ್ಸ್ ಕೊಡುಲು ಕೂಡ ಹಣವಿಲ್ಲ. ಮನೆ ಇಲ್ಲದ ಕಾರಣ ನಾನು ಮನೆ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಇದ್ದರಿಂದ ನನ್ನ ಆರೋಗ್ಯ ಹದಗೆಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.