ರಾಜ್ ಸಮಾಧಿ ಪಕ್ಕ ಅಂಬಿ ಸಮಾಧಿಗೆ ಜಾಗ ಕೊಟ್ಟಿದ್ದು ಕುಮಾರಣ್ಣ

Date:

“ಮುಂಬರುವ ಮಂಡ್ಯ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ವಾಭಿಮಾನದ ಅಭ್ಯರ್ಥಿಗಳನ್ನು ಹಾಕಲಿ,” ಎಂದು ಮಾಜಿ ಸಂಸದ ಶಿವರಾಮೇಗೌಡ ಮಂಡ್ಯ ಸಂಸದೆ ಸುಮಲತಾಗೆ ಚಾಲೆಂಜ್ ಹಾಕಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ಸಂಸದೆ ಸುಮಲತಾಗೆ ಸರಿಯಾದ ಅಡ್ವೈಸರ್ ಇಲ್ಲ. ಅವರು ಒಂದು ಪಕ್ಷಕ್ಕೆ ಸೇರಿಕೊಳ್ಳಲಿ, ಬಿಜೆಪಿ ಇಲ್ಲ ಕಾಂಗ್ರೆಸ್ ಯಾವುದಾದರು ಸೇರಲಿ. ಯಾವ ಪಕ್ಷವನ್ನು ಸೇರದಿದ್ರೆ ವಾಟ್ ನೆಕ್ಟ್? ಎಂದು ಪ್ರಶ್ನಿಸಿದ್ದಾರೆ.
“ಮಂಡ್ಯ ಜನ ದಡ್ಡರಲ್ಲ, ಒಂದು ಸಲ ಯಮಾರಿಸಿದ್ದೀರಾ, ಮತ್ತೆ ಯಮಾರಲ್ಲ. ಯಾವುದಾದರೂ ಒಂದು ಪಕ್ಷ ಸೇರಿ, ಆಗ ಅಲ್ಲಿನ‌ ಮುಖಂಡರಾದರೂ ನಿಮ್ಮ ಜೊತೆ ಬರುತ್ತಾರೆ,” ಎಂದು ಸುಮಲತಾಗೆ ಜೆಡಿಎಸ್ ಮಾಜಿ ಸಂಸದ ಶಿವರಾಮೇಗೌಡ ರಾಜಕೀಯ ಕಿವಿಮಾತು ಹೇಳಿದರು.


“ಸುಮಲತಾ ಮಂಡ್ಯ ಪಾಲಿಟಿಕ್ಸ್‌ನಲ್ಲಿ ಬಿಗ್ ಝೀರೋ. ಆಕೆ ಬಗ್ಗೆ ಮಾತನಾಡದಂತೆ ನಮ್ಮ ನಾಯಕರಲ್ಲಿ ಮನವಿ ಮಾಡುತ್ತೇನೆ. ದೊಡ್ಡ ಸೊನ್ನೆಯಿರುವಾಗ ಅಂಬರೀಶ್ ಹೆಸರೇಳಿಕೊಂಡು ಯಾರು ಹೋದವರು?,” ಎಂದು ಪ್ರಶ್ನಿಸಿದರು.
“ಅಂಬರೀಶ್ ಗುಣಾನೆ ಬೇರೆ, ಸುಮಲತಾ ಗುಣಾನೇ ಬೇರೆ. ಅಂಬರೀಶ್ ಪತ್ನಿ ಎಂದು ಹೈಜಾಕ್ ಮಾಡಿ ಮಂಡ್ಯ ಜನರ ಮನಸ್ಸು ಗೆದ್ದಿದ್ದಾರೆ ಅಷ್ಟೇ. ಅಂಬರೀಶ್ ಕಾಲದಲ್ಲೂ ಗಣಿ ನಡೆಯುತ್ತಿತ್ತು ಅಲ್ವಾ? ಆಗ ಯಾಕೆ ಇಯಮ್ಮ ನಿಲ್ಲಿಸಲಿಲ್ಲ.”
“ಮಂಡ್ಯ ಜಿಲ್ಲೆಯಿಂದ ಹೋದವರಿಗೆ ಕಾಫಿ ಬೇಡ, ನೀವು ಒಂದು ಲೋಟ ನೀರು ಕೊಟ್ಟಿದ್ದರೆ ಸಾಕಾಗಿತ್ತು. ಮಂಡ್ಯ ಜನಕ್ಕೆ ಎಲ್ಲವೂ ಗೊತ್ತಿದೆ, ಹಾಗಾಗಿ ಇದನ್ನ ಇಲ್ಲಿಗೆ ಬಿಡಿ. ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ.”
“ಸಂಸದೆ ಸುಮಲತಾರನ್ನು ಜನ ಆಗಲೇ ಮರೆತಿದ್ರು, ಆದರೆ ನಮ್ಮ ನಾಯಕರೇ ಮಾತನಾಡಿ ಮತ್ತೆ ನೆನಪಿಸಿದರು. ಅಂಬರೀಶ್ ಸತ್ತಾಗ ಮಂಡ್ಯಕ್ಕೆ ಶವ ತೆಗೆದುಕೊಂಡು ಹೋಗೋದು ಬೇಡ ಅಂತ ಸುಮಲತಾ ಹೇಳಿದ್ದರು. ಆದರೆ ಸಿಎಂ ಆಗಿದ್ದ ಕುಮಾರಸ್ವಾಮಿ ಮಂಡ್ಯಕ್ಕೆ ತಂದರು. ರಾಜ್‌ಕುಮಾರ್ ಪಕ್ಕದಲ್ಲೇ ಅಂಬಿ ಇರಬೇಕು ಅಂತ ಸಮಾಧಿಗೆ ಜಾಗ ಕೊಟ್ಟರು.”

“ಸುಮಲತಾ ಆಂಧ್ರಕ್ಕೂ ಮಂಚವಾಡು ಅನಂತುಡು ಅಂದಂಗೆ ಅವರು ಅನಂತಪುರದವರು. ಅಂಬರೀಶ್ ಮದ್ವೆ ಆಗಿ ಬಂದಮೇಲೆ ಅವರ ಧರ್ಮ‌ಪತ್ನಿ ಅಂತ ಸ್ವೀಕಾರ ಮಾಡಿದ್ದೇವೆ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎನ್ನುವುದರ ಮೂಲಕ ಶಿವರಾಮೇಗೌಡ ಮತ್ತೆ ಸುಮಲತಾ ಮೂಲ‌ ಪ್ರಶ್ನಿಸಿದರು.
“ಸಿನಿಮಾ ರೀತಿಯಲ್ಲೇ ಸಂಸದೆಯಾಗಿಯೂ ನಟನೆ ಮಾಡ್ತಿದ್ದಾರೆ. ಕರ್ಣ ಎಂದು ಹೆಸರು ಪಡೆದಿರುವ ಅಂಬರೀಶ್‌ರವರ ಕೊಡುಗೆಯೂ ಮಂಡ್ಯಕ್ಕೆ ಶೂನ್ಯ. ಸಂಸದೆ ಸುಮಲತಾ ಕೊರೊನಾ ಕಾಲದಲ್ಲಿ ಏನು ಮಾಡಿದ್ದಾರೆ ಹೇಳಿ?,” ಎಂದು ಸಂಸದೆ ಸುಮಲತಾಗೆ ಮಾಜಿ ಸಂಸದ ಶಿವರಾಮೇಗೌಡ ಪ್ರಶ್ನೆ ಹಾಕಿದರು.

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...