ರಾತ್ರಿ ಕೆಟ್ಟ ಕನಸುಗಳು ಬೀಳುವುದಕ್ಕೆ ಕಾರಣವಿದೆ! ತಡೆಯಲು ಹೀಗೆ ಮಾಡಿ
ಕೆಟ್ಟ ಕನಸುಗಳು ಬೀಳುವುದು ಸಹಜ. ಆದರೆ ಕೆಲವೊಮ್ಮೆ ಅವು ಅಷ್ಟು ಭಯಾನಕವಾಗಿರುತ್ತವೆ ಎಚ್ಚರವಾದ ಮೇಲೂ ಆ ಭಯ ಮನಸ್ಸಿನಿಂದ ಹೋಗುವುದಿಲ್ಲ. ಇಂತಹ ದುಃಸ್ವಪ್ನಗಳು ಪದೇಪದೇ ಬೀಳುತ್ತಿದ್ದರೆ, ಅದು ನಿದ್ರೆಯ ಗುಣಮಟ್ಟಕ್ಕೆ ಹಾಗೂ ದಿನನಿತ್ಯದ ಜೀವನಕ್ಕೆ ಅಡ್ಡಿಯಾಗಬಹುದು. ತಜ್ಞರ ಪ್ರಕಾರ, ಈ ಸ್ಥಿತಿಯನ್ನು ದುಃಸ್ವಪ್ನ ಅಸ್ವಸ್ಥತೆ (Nightmare Disorder) ಎಂದು ಕರೆಯಲಾಗುತ್ತದೆ.
ದುಃಸ್ವಪ್ನ ಅಸ್ವಸ್ಥತೆ ಎಂದರೇನು?
ನೈಟ್ಮೇರ್ ಡಿಸಾರ್ಡರ್ ಅಂದರೆ ಆಳವಾದ ನಿದ್ರೆಯ ವೇಳೆಯಲ್ಲಿ ಬರುವ ಭಯಾನಕ ಕನಸುಗಳಿಂದ ವ್ಯಕ್ತಿ ತಕ್ಷಣ ಎಚ್ಚರಗೊಳ್ಳುವ ಸ್ಥಿತಿ. ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ ಪ್ರಕಾರ, ಸುಮಾರು 4% ವಯಸ್ಕರು ಈ ತೊಂದರೆಯನ್ನು ಅನುಭವಿಸುತ್ತಾರೆ. ಕೆಲವರಿಗೆ ಕನಸಿನ ವಿಷಯ ನೆನಪಿರುತ್ತದೆ, ಕೆಲವರಿಗೆ ಸಂಪೂರ್ಣ ಮರೆತುಹೋಗುತ್ತದೆ.
ಕಾರಣಗಳೇನು?
ಹೆಚ್ಚು ಒತ್ತಡ ಅಥವಾ ಆತಂಕ
ಆಘಾತಕಾರಿ ಘಟನೆಗಳು (PTSD)
ಖಿನ್ನತೆ ಅಥವಾ ಮನೋವ್ಯಾಧಿ
ಕೆಲವು ಔಷಧಿಗಳ ಅಡ್ಡಪರಿಣಾಮ
ಅನಿಯಮಿತ ನಿದ್ರೆ ಪದ್ದತಿ
ಮದ್ಯಪಾನ ಅಥವಾ ನಿದ್ರೆಗೆ ಮುಂಚೆ ಭಾರೀ ಊಟ
ಭಯಾನಕ ಚಿತ್ರಗಳು ಅಥವಾ ವಿಚಾರಗಳನ್ನು ನೋಡುವುದು
ಈ ಎಲ್ಲಾ ಅಂಶಗಳು ನೇರ ಹಾನಿ ಮಾಡದಿದ್ದರೂ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ತಡೆಗಟ್ಟುವ ಮಾರ್ಗಗಳು:
ಸ್ಥಿರವಾದ ನಿದ್ರೆ ವೇಳಾಪಟ್ಟಿ ಕಾಯ್ದುಕೊಳ್ಳಿ.
ನಿದ್ರೆಗೆ ಮುಂಚೆ ಶಾಂತ ವಾತಾವರಣ ನಿರ್ಮಿಸಿ.
ಭಾರೀ ಊಟ ಮತ್ತು ಮದ್ಯಪಾನ ತಪ್ಪಿಸಿ.
ಭಯಾನಕ ಚಿತ್ರಗಳು ಅಥವಾ ವಿಚಾರಗಳಿಂದ ದೂರವಿರಿ.
ಇಮೇಜ್ ರಿಹರ್ಸಲ್ ಥೆರಪಿ (Image Rehearsal Therapy) ಅಭ್ಯಾಸ ಮಾಡುವುದರಿಂದ ಮನಸ್ಸು ನೆಮ್ಮದಿಯಾಗುತ್ತದೆ.
ವೈದ್ಯರನ್ನು ಸಂಪರ್ಕಿಸಬೇಕಾದ ಸಂದರ್ಭಗಳು:
ವಾರದಲ್ಲಿ ಅನೇಕ ಬಾರಿ ದುಃಸ್ವಪ್ನಗಳು ಬೀಳುತ್ತಿದ್ದರೆ.
ಕನಸಿನ ವೇಳೆ ಕಿರುಚಾಟ, ಉಸಿರಾಟದ ತೊಂದರೆ ಉಂಟಾದರೆ.
ಆತಂಕ, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳು ಕಂಡುಬಂದರೆ.
ಕೆಟ್ಟ ಕನಸುಗಳು ಸಾಮಾನ್ಯವಾದರೂ, ಪದೇಪದೇ ಆಗುತ್ತಿದ್ದರೆ ಅದು ನೈಟ್ಮೇರ್ ಡಿಸಾರ್ಡರ್ ಆಗಿರಬಹುದು. ಸರಿಯಾದ ನಿದ್ರಾ ಪದ್ದತಿ, ವಿಶ್ರಾಂತಿ ಮತ್ತು ತಜ್ಞರ ಸಲಹೆಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು.






