ಆರಂಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಎಲಿಮಿನೇಶನ್ ವೇಳೆ ಟಾಸ್ಕ್‌ನ್ನು ಸರಿಯಾಗಿ ಮಾಡದೆ ನಿರ್ಮಲಾ ಚೆನ್ನಪ್ಪ ಅವರು ನಾಮಿನೇಟ್ ಆಗಿದ್ದರು. ಆಮೇಲೆ ಪ್ರಶಾಂತ್ ಸಂಬರಗಿ ಅವರು ನಿರ್ಮಲಾರನ್ನು ಬಚಾವ್ ಕೂಡ ಮಾಡಿದ್ದರು. ಆದರೆ ಎಲ್ಲರೂ ಒಂದು, ನಿರ್ಮಲಾ ಮಾತ್ರ ಬೇರೆ ಎನ್ನುವಂತಾಗಿದೆ.

ನಿರ್ಮಲಾ ಅತಿಯಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಕೆಲ ಬಿಗ್ ಬಾಸ್ ಸ್ಪರ್ಧಿಗಳು ಹೇಳುತ್ತಿದ್ದಾರೆ. ಊಟದ ವಿಚಾರಕ್ಕೆ ನಿಮ್ಮಿ ಅತಿರೇಕ ಮಾಡುತ್ತಿದ್ದಾರೆ, ಎಲ್ಲರ ಜೊತೆ ಕೂತು ಊಟ ಮಾಡುತ್ತಿಲ್ಲ, ಎಲ್ಲರ ಗಮನವೂ ಅವರ ಕಡೆಗೆ ಇರಬೇಕು ಅಂತ ನಿರ್ಮಲಾ ಬಯಸುತ್ತಿದ್ದಾರೆ ಎಂದು ಚಂದ್ರಕಲಾ ಮೋಹನ್ ಹೇಳಿದ್ದಾರೆ. ಈ ಕುರಿತು ಗೀತಾ, ಚಂದ್ರಕಲಾ, ಶಮಂತ್ ದೊಡ್ಡ ಚರ್ಚೆ ಮಾಡಿದ್ದಾರೆ.
ನಿರ್ಮಲಾ ಚೆನ್ನಪ್ಪ ಅವರು ಇರೋದು ಹೀಗೆನಾ? ಅಥವಾ ಬಿಗ್ ಬಾಸ್ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರಾ? ಬಿಗ್ ಬಾಸ್ ನೀಡಿರುವ ಸಿಕ್ರೇಟ್ ಟಾಸ್ಕ್? ಎನ್ನೋದು ನಿಜಕ್ಕೂ ಗೊತ್ತಿಲ್ಲ. ಪ್ರತಿಯೊಬ್ಬರೂ ಕೂಡ ತಾನೇ ಹೆಚ್ಚು ಕಾಣಿಸಿಕೊಳ್ಳಬೇಕು, ತನ್ನ ದನಿಯೇ ಹೆಚ್ಚಾಗಿ ಕೇಳಬೇಕು ಎಂಬ ಉದ್ದೇಶ ಹೊಂದಿರುತ್ತಾರೆ. ಈ ಕಾರಣದಿಂದ ನಿರ್ಮಲಾ ಈ ರೀತಿ ಮಾಡುತ್ತಿರಬಹುದೇ? ಎಂಬ ಸಂದೇಹ ಕೂಡ ಶುರುವಾಗಿದೆ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ಸಿಗಬಹುದು.