ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ವುಡ್ ಸಿಂಡ್ರೆಲಾ ಒಟ್ಟಿಗೇ ಕಿರುತೆರೆಗೆ ಬಂದು, ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಒಟ್ಟಿಗೇ ಎಂಟ್ರಿಕೊಟ್ಟವರು. ನಂತರ ಡ್ರಾಮಾ, ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾಗಳಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡವರು. ಒಟ್ಟಿಗೆ ನಡೆಸಿದ ಮೊದಲ ಹಾಗೂ ವೃತ್ತಿ ಜೀವನದ ಮೊದಲ ಸಿನಿಮಾವೂ ಆದ ಮೊಗ್ಗಿನ ಮನಸ್ಸಿನಿಂದ ಹಿಡಿದು, ಇದುವರೆಗೆ ಇಬ್ಬರೂ ಒಟ್ಟಿಗೇ ನಟಿಸಿದ ಕೊನೆಯ ಸಿನಿಮಾ ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾ ಆಗುವ ಗ್ಯಾಪಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು.
ಬಹುಕಾಲದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದವರನ್ನು ಒಪ್ಪಿಸಿ ದಾಂಪತ್ಯಕ್ಕೆ ಕಾಲಿಟ್ರು. ಸ್ಯಾಂಡಲ್ವುಡ್ನ ಈ ಚಂದದ ಜೋಡಿಗೆ ಐರಾ ಎಂಬ ಮುದ್ದು ಮಗಳೂ ಇದ್ದಾಳೆ.
ಮದುವೆ ಬಳಿಕ ಅಂದರೆ 2016ರಲ್ಲಿ ರಿಲೀಸ್ ಆದ ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾದ ಬಳಿಕ ರಾಧಿಕಾ ಒಂದೇ ಒಂದು ಸಿನಿಮಾದಲ್ಲೂ ನಟಿಸಿರಲಿಲ್ಲ. ಈಗ ರಾಧಿಕಾ ಅವರ ಕಮ್ ಬ್ಯಾಕ್ ಮೂವಿ ‘ಆದಿಲಕ್ಷ್ಮೀ ಪುರಾಣ’ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಾಯಕ ನಟನಾಗಿ ನಟಿಸುತ್ತಿದ್ದಾರೆ.
ಈ ಸಿನಿಮಾದ ಟ್ರೇಲರನ್ನು ರಾಕಿಂಗ್ ಸ್ಟಾರ್ ನಿನ್ನೆ ರಿಲೀಸ್ ಮಾಡಿದ್ದಾರೆ. ಟ್ರೇಲರ್ ಸಿನಿಮಾದ ಮೇಲೆ ನಿರೀಕ್ಷೆಯನ್ನು ಹುಟ್ಟಿಸಿದೆ. ಟ್ರೇಲರ್ ಬಿಡುಗಡೆ ಮಾಡಿದ ಯಶ್ ನಾನು ರಾಧಿಕಾಳ ಅಭಿಮಾನಿ ಎನ್ನುವ ಅರ್ಥದಲ್ಲಿ ಮಾತಾಡಿದ್ದಾರೆ.
ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕಾರ್ಯಕ್ರಮಕ್ಕೆ ಕರೆದ್ರು ಬಂದೆ. ರಾಧಿಕಾ ಸಿನಿಮಾ ಆಗಿದ್ದರಿಂದ ಬರಲೇ ಬೇಕಾಯಿತು. ಇಲ್ದೇ ಇದ್ದಿದ್ರೆ ಮನೇಲಿ ಬೀಳ್ತಾ ಇತ್ತಲ್ಲ ಎಂದು ತಮಾಷೆ ಮಾಡಿದ ಯಶ್ ಬಳಿಕ ರಾಧಿಕಾಳ ಎಲ್ಲಾ ಹೊಸ ಪ್ರಯತ್ನಗಳಿಗೆ ಸಾಥ್ ನೀಡುವೆ ಎನ್ನುವ ಮಾತು ಆಡಿದ್ದಾರೆ. ರಾಧಿಕಾಳಲ್ಲಿನ ಪ್ರತಿಭೆ ಹಾಳಾಗಲು ಬಿಡುವುದಿಲ್ಲ. ಅವಳು ಏನೇ ಮಾಡಿದ್ರು ನಾನು ಅಭಿಮಾನಿಯಂತೆ ಕಾಯ್ತಿರ್ತೀನಿ ಎಂದಿದ್ದಾರೆ.