ರಾಧೆ ಡಬ್ಬ ಸಿನಿಮಾ: ಸಲ್ಮಾನ್ ತಂದೆ!

Date:

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ರಾಧೆ ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ವಿಮರ್ಶಾತ್ಮಕವಾಗಿ ರಾಧೆ ಚಿತ್ರಕ್ಕೆ ಹಿನ್ನಡೆಯಾಗಿದೆ. ರಾಧೆ ನೋಡಿದ ಬಹುತೇಕರು ಚಿತ್ರ ಚೆನ್ನಾಗಿಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದರು. ಇದೀಗ, ಸ್ವತಃ ಸಲ್ಮಾನ್ ಖಾನ್ ಸಲೀಮ್ ಖಾನ್ ಸಹ ರಾಧೆ ಚಿತ್ರ ಇಷ್ಟ ಆಗಿಲ್ಲ ಎಂದು ಹೇಳಿದ್ದಾರೆ. ಪ್ರಾಮಾಣಿಕ ವಿಮರ್ಶೆ ಕೊಡುವುದಕ್ಕೆ ಸಲ್ಲು ತಂದೆ ಹೆಸರುವಾಸಿಯಾದವರು. ಸಿನಿಮಾ ಯಾವುದೇ ಇರಲಿ ನೇರವಾಗಿ ಇದ್ದುದ್ದನ್ನ ಇದ್ದಂತೆ ಹೇಳುವ ವ್ಯಕ್ತಿತ್ವ. ಈಗ, ಮಗನ ಸಿನಿಮಾ ಎಂದು ಬೀಗದೆ ‘ಚಿತ್ರದಲ್ಲಿ ಅಂತಹ ಅದ್ಭುತ ಏನೂ ಇಲ್ಲ. ಇದೊಂದು ಸಾಮಾನ್ಯ ಸಿನಿಮಾ ಅಷ್ಟೆ’ ಎಂದಿದ್ದಾರೆ. ಮುಂದೆ ಓದಿ….

ಡೈನಿಕ್ ಭಾಸ್ಕರ್ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಸಲೀಮ್ ಖಾನ್ ”ಈ ಹಿಂದೆ ತೆರೆಕಂಡಿದ್ದ ದಬಾಂಗ್ 3 ಚಿತ್ರ ವಿಭಿನ್ನವಾಗಿತ್ತು. ಭಜರಂಗಿ ಭಾಯ್‌ಜಾನ್ ಸಿನಿಮಾ ತುಂಬಾ ಚೆನ್ನಾಗಿತ್ತು. ಆದರೆ, ರಾಧೆ ಅಂತಹ ಅದ್ಭುತ ಚಿತ್ರವಲ್ಲ” ಎಂದು ಸಲ್ಲು ಸಿನಿಮಾದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.

”ಕಮರ್ಷಿಯಲ್ ಆಗಿ ಹಣ ಗಳಿಸುವುದು ಪ್ರಮುಖವಾಗುತ್ತದೆ. ಅಂತಹ ಉದ್ದೇಶದಿಂದ ನೋಡಿದ್ರೆ ರಾಧೆ ಆ ಕೆಲಸ ಮಾಡಿದೆ. ಸಿನಿಮಾ ಅಂದ್ಮೇಲೆ ಕಲಾವಿದರು, ನಿರ್ಮಾಪಕರು, ವಿತರಕರು, ಪ್ರದರ್ಶಕರಿಗೆ ಹಣ ತಂದುಕೊಡಬೇಕಾಗುತ್ತದೆ. ಹಾಗ್ನೋಡಿದ್ರೆ ಸಲ್ಮಾನ್ ಖಾನ್ ಸಿನಿಮಾ ಉತ್ತಮ ಪ್ರದರ್ಶನ ತೋರಲಿದೆ. ಅದು ಬಿಟ್ಟರೆ ಸಿನಿಮಾ ಅಷ್ಟು ದೊಡ್ಡದಲ್ಲ” ಎಂದು ಅಭಿಪ್ರಾಯಪಟ್ಟರು.

 

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...