ರಾಬರ್ಟ್ ಚಿತ್ರ 100 ಕೋಟಿ ಸೇರಿದೆ ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚಿಗಷ್ಟೇ ರಾಬರ್ಟ್ ಚಿತ್ರತಂಡ ಸಕ್ಸಸ್ ಪಾರ್ಟಿ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರವನ್ನು ಹಂಚಿಕೊಂಡಿತ್ತು.
ಇದೀಗ ನೆನಪಿರಲಿ ಪ್ರೇಮ್ ರಾಬರ್ಟ್ 100 ಕೋಟಿ ದಾಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ವಿಶ್ ಮಾಡಿದ್ದಾರೆ. ನೂರು ಕೋಟಿ ದಾಟಿದ ರಾಬರ್ಟ್ ಚಿತ್ರತಂಡಕ್ಕೆ ಶುಭಾಶಯಗಳು ಎಂದ ಪ್ರೇಮ್ ದರ್ಶನ್ ಅವರಿಗೆ ಶುಭಕೋರಿದ್ದು ನಿರ್ದೇಶಕ ತರುಣ್ ಸುಧೀರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.