ಡಿ ಬಾಸ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ರಾಬರ್ಟ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಹಳ ಕ್ರೇಜ್ ಹುಟ್ಟಿಸಿದೆ, ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸದ್ಯ ಚಿತ್ರೀಕರಣ ಆರಂಭಿಸಿದೆ.
ಆರಂಭದಿಂದಲೂ ಒಂದಲ್ಲೊಂದು ವಿಚಾರದಲ್ಲಿ ಸುದ್ದಿ ಮಾಡುತ್ತಲೆ ಇರುವ ರಾಬರ್ಟ್ ಚಿತ್ರತಂಡದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ರಾಬರ್ಟ್ ಚಿತ್ರದಲ್ಲಿ ನಟ ವಿನೋದ್ ಪ್ರಭಾಕರ್ ಕಾಣಿಸಿಕೊಳ್ಳುತ್ತಿದ್ದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎನ್ನುವ ಮಾತುಗಳು ಕೇಳಿ ಬರುತ್ತಿವೆ ಅಲ್ಲದೆ ವಿನೋದ್ ಪ್ರಭಾಕರ್ ಭಾಗದ ಚಿತ್ರೀಕರಣ ಕೂಡ ಬಹುತೇಕ ಮುಗಿದಿದೆಯಂತೆ.
ಚಿತ್ರದ ಯಾವುದೇಮಾಹಿತಿ ಬಹಿರಂಗವಾಗಬಾರದು ಎನ್ನುವ ಕಾರಣಕ್ಕೆ ಸೆಟ್ ನಲ್ಲಿ ಯಾರೂ ಕೂಡ ಮೊಬೈಲ್ ಬಳಸಬಾರದು ಎಂದು ಬ್ಯಾನ್ ಮಾಡುವ ಮೂಲಕ ಸಾಕಷ್ಟು ಎಚ್ಚರಿಕೆವಹಿಸಿ ಚಿತ್ರೀಕರಣ ಮಾಡುತ್ತಿದ್ದರೂ ಸಹ ಒಂದಿಷ್ಟು ವಿಚಾರಗಳು ಲೀಕ್ ಆಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.