ತಮ್ಮ ರಾಜೀನಾಮೆ ಪತ್ರದಲ್ಲಿ ಅಶೋಕ್ ಕುಮಾರ್ ಅವರು ಕಳೆದ 3 ವರ್ಷಗಳಿಂದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ನಾಗಿದ್ದೇನೆ. ವೈಯಕ್ತಿಕ ಕಾರಣಗಳಿಂದಾಗಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಈ ಕೂಡಲೇ ಇದನ್ನು ಅಂಗೀಕರಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು, ಒತ್ತಡದಿಂದಲ್ಲ ಎಂದು ಸ್ಪಷ್ಟಣೆ ನೀಡಿದ ಅವರು, ತಮ್ಮ ಮುಂದಿನ ನಡೆಯ ಕುರಿತು ಅಂತರ ಕಾಯ್ದುಕೊಂಡಿದ್ದಾರೆ.ಈ ಕುರಿತು ವಿಚಾರಿಸದರೇ, ಶೀಘ್ರದಲ್ಲೇ ಎಲ್ಲವನ್ನು ತಿಳಿಸುತ್ತೇನೆ ಅಂಥ ಹೇಳಿದ್ದಾರೆ.
‘ ರಾಮನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೇ ನೀಡಿದ ಎಂ.ಪಿ. ಅಶೋಕ್ ಕುಮಾರ್ !? ಸಿ ಎಂ ಗೆ ಶಾಕ್ !
Date: