ಅರುಣ್ ಯೋಗಿರಾಜ್ ರಾಮಲಲ್ಲಾ ಮೂರ್ತಿ ಕೆತ್ತನೆಯಿಂದ ದೇಶ ಮಾತ್ರವಲ್ಲ ಪ್ರಪಂಚದಾದ್ಯಂತ ಗಮನ ಸೆಳೆದವರು. ಈಗ ಅರುಣ್ ಯೋಗಿರಾಜ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಲಾಗಿರುವ ಸುತ್ತಿಗೆ ಮತ್ತು ಉಳಿಯನ್ನು ಪೋಟೋ ತೆಗೆದು ಶೇರ್ ಮಾಡಿಕೊಂಡಿದ್ದಾರೆ. ರಾಮಲಲ್ಲಾನ ಕಣ್ಣುಗಳನ್ನು ಕೆತ್ತಲು ಬಳಸಲಾಗಿರುವಂತಹ ಸುತ್ತಿಗೆ ಮತ್ತು ಉಳಿ ಎಂದು ದೇವರ ಮುಂದೆ ಅವುಗಳನ್ನು ಹಿಡಿದು ಪೋಟೋ ತೆಗೆದಿದ್ದಾರೆ.
500 ವರ್ಷಗಳಿಂದ ರಾಮ ಮಂದಿರಕ್ಕಾಗಿ ಸಾಕಷ್ಟು ಹೋರಾಟಗಳು ನಡೆದವು . ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಎಂದಾಗ ಅಗಣಿತ ಭಕ್ತರು ರಾಮಲಲ್ಲಾ ಮೂರ್ತಿ ಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ನಂತರ ಎಲ್ಲರ ಗಮನ ಸೆಳೆದಿದ್ದು ರಾಮನ ಆ ಮುದ್ದಾದ ಕಣ್ಣುಗಳು. ಈ ಕಣ್ಣಗಳನ್ನು ಕೆತ್ತಲು ಬೆಳ್ಳಿಯ ಸುತ್ತಿಗೆ ಮತ್ತು ಚಿನ್ನದ ಉಳಿಯನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಆ ಘಳಿಗೆಯನ್ನು ನೆನಪು ಮಾಡಿಕೊಂಡು ಅರುಣ್ ಯೋಗಿರಾಜ್ ಈ ಪೋಸ್ಟ್ ಶೇರ್ ಮಾಡಿದ್ದಾರೆ.