ರಾಮೇಶ್ವರಂ ಕೆಫೆ ರೀತಿಯಲ್ಲೇ ಬೇರೆ ಕಡೆ ಸ್ಫೋಟ: ಸಿಎಂ, ಡಿಸಿಎಂಗೂ ಬಾಂಬ್ ಬೆದರಿಕೆ

Date:

ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟವಾಗಿ ವಾರ ಕಳೆದಿಲ್ಲ. ಇದರ ನಡುವೆಯೇ ಮಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ಗೃಹ ಸಚಿವ ಡಾ ಜಿ ಪರಮೇಶ್ವರ್‌ ಸೇರಿ ಹಲವು ಸಚಿವರಿಗೆ ಇಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ರಾಜ್ಯದ ಹಲವು ಕಡೆ ಬಾಂಬ್‌ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.
shahidkhan10786@protonmail.com ಇಮೇಲ್ ವಿಳಾಸದಿಂದ ರಾಜ್ಯದ ಪ್ರಮುಖ ನಾಯಕರಿಗೆ ಬೆದರಿಕೆ ಇಮೇಲ್‌ ಬಂದಿದೆ. ಈ ಬಗ್ಗೆ ಬೆಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆ ಮೇಲ್‌ನಲ್ಲಿ ಸಿನಿಮಾ ಟ್ರೇಲರ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಿರುವ ವ್ಯಕ್ತಿ ಪರೋಕ್ಷವಾಗಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣವನ್ನು ತನ್ನ ಮೇಲ್‌ನಲ್ಲಿ ಉಲ್ಲೇಖಿಸಿದ್ದಾನೆ.
“ಸಿನಿಮಾ ಟ್ರೈಲರ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ನೀವು ನಮಗೆ 2.5 ಮಿಲಿಯನ್ ಡಾಲರ್ ಹಣವನ್ನು ನೀಡದಿದ್ದರೆ, ನಾವು ಕರ್ನಾಟಕದಾದ್ಯಂತ ಬಸ್‌, ರೈಲು, ದೇವಸ್ಥಾನ, ಹೋಟೆಲ್‌ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳನ್ನು ನಡೆಸುತ್ತೇವೆ” ಎಂದು ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ.
ಅದಲ್ಲದೇ “ನಾವು ನಿಮಗೆ ಇನ್ನೊಂದು ಟ್ರೈಲರ್ ಅನ್ನು ತೋರಿಸಲು ಬಯಸುತ್ತೇವೆ. ನಾವು ಮುಂದೆ ಅಂಬಾರಿ ಉತ್ಸವ ಬಸ್‌ ಅನ್ನು ಸ್ಫೋಟಿಸಲಿದ್ದೇವೆ. ಅಂಬಾರಿ ಉತ್ಸವ ಬಸ್ ಸ್ಫೋಟದ ಬಳಿಕ ನಾವು ನಮ್ಮ ಬೇಡಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸುತ್ತೇವೆ. ಜೊತೆಗೆ ನಿಮಗೆ ಕಳುಹಿಸಲಾದ ಮೇಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಪೋಸ್ಟ್‌ ಮಾಡುತ್ತೇವೆ. ಮುಂದಿನ ಸ್ಫೋಟದ ಬಗ್ಗೆ ಮಾಹಿತಿಯನ್ನು ನಾವು ಟ್ವೀಟ್‌ ಮಾಡುತ್ತೇವೆ” ಎಂದು ಮೇಲ್‌ನಲ್ಲಿ ತಿಳಿಸಲಾಗಿದೆ.

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ: 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್...

ಮಾಸಿಕ ಮುಟ್ಟಿನ ವೇಳೆ ಮಹಿಳೆಯರು ತಲೆಸ್ನಾನ ಮಾಡಬಾರದು?!

ಮಾಸಿಕ ಮುಟ್ಟಿನ ವೇಳೆ ಮಹಿಳೆಯರು ತಲೆಸ್ನಾನ ಮಾಡಬಾರದು ಎಂಬ ನಂಬಿಕೆ ಅನೇಕ...

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್

ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾದ ಸುಹಾನಾ ಸೈಯದ್ ಸರಿಗಮಪ ಖ್ಯಾತಿಯ ಸುಹಾನಾ ಸೈಯದ್...

ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ

ತೀರ್ಥ ರೂಪಿಣಿಯಾಗಿ ದರ್ಶನ ಕೊಟ್ಟ ಕಾವೇರಿ ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ...