ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಮುನ್ನ ನವದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು ದೋಸ್ತಿ ಸರಕಾರ ಸದೃಡವಾಗಿದ್ದು, ಯಾವುದೇ ಕಾರಣಕ್ಕೂ ಸರಕಾರ ಅಸ್ಥಿರವಾಗುವುದಿಲ್ಲ, ಐದು ವರುಷಗಳ ಕಾಲ ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗಲಿದೆ, ಕಾಂಗ್ರೆಸ್ ನ ಯಾವುದೇ ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ ಅಂತ ಹೇಳಿದರು.
ಇನ್ನು ಕಳೆದ ಮೂರು ದಿವಸದಿಂದ ನವದೆಹಲ್ಲಿಯರಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ವರು ರಾಹುಲ್ ಗಾಂಧಿಯವರೊಂದಿಗೆ ರಾಜ್ಯರಾಜಕೀಯದ ಬಗ್ಗೆ ಮಹತ್ವದ ಮಾತುಕತೆ ನಡಸಲಿದ್ದಾರೆ ಎನ್ನಲಾಗಿದ್ದು, ಜೆಡಿಎಸ್‌ನೊಂದಗಿನ ಮೈತ್ರಿ ಲೋಕಸಭಾ ಚುನಾವಣೆ ವೇಳೆಯಲ್ಲಿ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ನಮ್ಮ ಮುಂದಿರುವ ಸವಾಲುಗಳು ಏನು ಅನ್ನೋದರ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.