ಲೋಕಸಭೆ ಚುನಾವಣೆ ಪ್ರಚಾರದ ಮಧ್ಯೆಯೇ ರಾಹುಲ್ ಗಾಂಧಿ ಪೌರತ್ವದ ಬಗ್ಗೆ ಸಾಕಷ್ಟು ಚರ್ಚೆಗಳಾಗ್ತಿವೆ. ರಾಹುಲ್ ಗಾಂಧಿ ಹುಟ್ಟಿನ ಬಗ್ಗ ನಿವೃತ್ತ ನರ್ಸ್ ಒಬ್ಬರು ಮಾತನಾಡಿದ್ದಾರೆ. ವಯನಾಡ್ ಮತದಾರರಾಗಿರುವ ನಿವೃತ್ತ ನರ್ಸ್ ರಾಜಮ್ಮ, ರಾಹುಲ್ ಗಾಂಧಿ ಎಲ್ಲಿ ಜನಿಸಿದ್ದಾರೆ ಎಂಬುದನ್ನು ಹೇಳಿದ್ದಾರೆ.
ರಾಹುಲ್ ಗಾಂಧಿ ಪೌರತ್ವದ ಬಗ್ಗೆ ಪ್ರಶ್ನೆ ಎತ್ತಬೇಡಿ. ರಾಹುಲ್ ಗಾಂಧಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜೂನ್ 19, 1970 ರಂದು ಜನಿಸಿದ್ದಾರೆಂದು ರಾಜಮ್ಮ ಹೇಳಿದ್ದಾರೆ. 72 ವರ್ಷದ ರಾಜಮ್ಮ ಆಗ ನರ್ಸ್ ತರಬೇತಿ ಪಡೆಯುತ್ತಿದ್ದರಂತೆ. ಶಿಶುವಾಗಿದ್ದ ರಾಹುಲ್ ರನ್ನು ಎತ್ತಿಕೊಂಡ ನರ್ಸ್ ಗಳಲ್ಲಿ ಇವ್ರೂ ಒಬ್ಬರಾಗಿದ್ದಂತೆ. ರಾಹುಲ್ ಗಾಂಧಿಯನ್ನು ಮೊದಲು ಎತ್ತಿಕೊಂಡ ನರ್ಸ್ ನಾನು. ನನಗೆ ತುಂಬಾ ಖುಷಿಯಾಗಿತ್ತು. ಇಂದಿರಾಗಾಂಧಿ ಮೊಮ್ಮಗನನ್ನು ಎತ್ತಿಕೊಳ್ಳಲು ಎಲ್ಲರೂ ಉತ್ಸುಕರಾಗಿದ್ದರು ಎಂದು ರಾಜಮ್ಮ ಹೇಳಿದ್ದಾರೆ.
49 ವರ್ಷಗಳ ನಂತ್ರ ಪ್ರೀತಿಯ ಮಗು ಕಾಂಗ್ರೆಸ್ ಅಧ್ಯಕ್ಷನ ಪಟ್ಟಕ್ಕೇರಿದೆ. ಆ ಕ್ಷಣವನ್ನು ನಾನು ಮರೆಯಲು ಸಾಧ್ಯವಿಲ್ಲ. ಆ ದಿನಗಳು ನನಗೆ ಸರಿಯಾಗಿ ನೆನಪಿದೆ ಎನ್ನುತ್ತಾರೆ ರಾಜಮ್ಮ.ರಾಹುಲ್ ಪೌರತ್ವದ ಬಗ್ಗೆ ಪ್ರಶ್ನೆ ಮಾಡಿರುವುದು ಬೇಸರ ತಂದಿದೆ. ಅವ್ರ ಜನನದ ಬಗ್ಗೆ ಆಸ್ಪತ್ರೆಯಲ್ಲಿ ಸಂಪೂರ್ಣ ದಾಖಲೆಯಿದೆ ಎನ್ನುತ್ತಾರೆ ರಾಜಮ್ಮ.