ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಬಗ್ಗೆ ಸಾವಿರಾರು ಮಂದಿ ಟ್ರೋಲ್ ಮಾಡುತ್ತಿದ್ದು, ಅವರಿಗೆ ಮತ್ತೊಂದು ವಿಷಯವನ್ನು ಸ್ವತಃ ರಾಹುಲ್ ಗಾಂಧಿ ಅವರೇ ನೀಡಿದ್ದಾರೆ.
ಸೋಮವಾರ ಸಂಸದರ ಪ್ರಮಾಣ ವಚನ ಸ್ವೀಕಾರದ ವೇಳೆ ರಾಹುಲ್ ಗಾಂಧಿ ಅವರು ವಯನಾಡಿನ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಇದಾದ ಬಳಿಕ ಸಂಸತ್ತಿನ ರಿಜಿಸ್ಟಾರ್‌ನಲ್ಲಿ ಸಹಿ ಹಾಕುವುದನ್ನೇ ಮರೆತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ನೆನಪಿಸಿ ಸಹಿ ಹಾಕಿಸಿದ್ದಾರೆ.
ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಗೊಂಡಿರುವ ರಾಹುಲ್ ಗಾಂಧಿ ಅವರು ಈ ರೀತಿ ನಿಯಮ ಮರೆತಿದ್ದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಹಿ ಹಾಕದೇ ವಾಪಸು ಹೋಗುವಾಗ ಗೃಹ ಸಚಿವ ರಾಜನಾಥ ಸಿಂಗ್ ಸೇರಿದಂತೆ ಹಲವು ಸಂಸದರು ಈ ಬಗ್ಗೆ ನೆನಪಿಸಿದ್ದಾರೆ. ಈ ರೀತಿ ಎಡವಟ್ಟು ಮಾಡಿಕೊಳ್ಳುವ ಕೆಲ ನಿಮಿಷದ ಮೊದಲು ಟ್ವೀಟ್ ಮಾಡಿದ್ದರು.ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಕಾಲೆಳೆದಿದ್ದಾರೆ