ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಹಾಗೂ ನರೇಂದ್ರ ಮೋದಿಯವರಿಗೆ ಟಾಂಗ್ ಕೊಡುತ್ತಿದ್ದ ಮಾಜಿ ಸಂಸದೆ ರಮ್ಯಾ ಫಲಿತಾಂಶದ ಬಳಿಕ ಬಹುತೇಕ ಕಣ್ಮರೆಯಾಗಿದ್ದಾರೆ. ಅಲ್ಲದೆ ಅವರ ಟ್ವಿಟ್ಟರ್ ಖಾತೆ ಕೂಡ ನಿಷ್ಕ್ರಿಯಗೊಂಡಿದೆ.
ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿದ್ದ ರಮ್ಯಾ ಅವರನ್ನು ಆ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಪ್ರವೀಣ್ ಚಕ್ರವರ್ತಿ ಎಂಬಾತನೊಂದಿಗೆ ಸೇರಿಕೊಂಡು ಭಾರಿ ಮೊತ್ತದ ಹಣವನ್ನು ಪಕ್ಷದಿಂದ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಪ್ರವೀಣ್ ಚಕ್ರವರ್ತಿ ಹಾಗೂ ರಮ್ಯಾ, ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 164 ರಿಂದ 184 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ತುಂಬಿದ್ದರಂತೆ.ಅಲ್ಲದೆ ಸಂಶೋಧನೆ ಹೆಸರಿನಲ್ಲಿ ಅಪಾರ ಮೊತ್ತದ ಹಣವನ್ನು ಪಡೆದಿದ್ದರಂತೆ. ಈ ಕುರಿತಾಗಿ ಗುಸುಗುಸು ದೆಹಲಿ ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದ್ದು, ಸತ್ಯಾಂಶ ಇನ್ನೂ ಬಹಿರಂಗವಾಗಬೇಕಿದೆ.