ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಕಳೆದ ವರ್ಷ ದರ್ಶನ್ ಅವರ ಯಾವ ಸಿನಿಮಾವನ್ನೂ ನೋಡಲು ಆಗದೇ ಬೇಸರದಿಂದ ಇದ್ದ ಅಭಿಮಾನಿಗಳಿಗೆ ದರ್ಶನ್ ‘ಯಜಮಾನ’ನಾಗಿ ಬಂದು ಪ್ರೀತಿ ತುಂಬಿದ್ದಾರೆ. ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ರಾಜ್ಯದಾದ್ಯಂತ ಯಜಮಾನ ದರ್ಶನ್ ಅಬ್ಬರವಿದೆ.
ಯಜಮಾನ ರಿಲೀಸ್ ಗೂ ಮುನ್ನವೇ ಟ್ರೇಲರ್ , ಸಾಂಗ್ ಗಳಿಂದ ಸದ್ದು ಮಾಡಿತ್ತು. ಅಂದು ಮಾಡಿದ್ದ ಸೌಂಡು ಈಗ ರಿಲೀಸ್ ಆದಮೇಲೆ ಮತ್ತಷ್ಟು ಹೆಚ್ಚಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಬಾಯಲ್ಲಿ ಗುನುಗುವ ‘ಯಜಮಾನ’ನ ಸಾಂಗ್ ‘ಬಸಣ್ಣಿ ಬಾ….’ ಈ ಹಾಡು ತುಂಬಾ ಜನಪ್ರಿಯವಾಗಿದೆ. ಯೂಟ್ಯೂಬ್ ನಲ್ಲಂತೂ ಇದರದ್ದೇ ಹವಾ..! 10 ಮಿಲಿಯನ್ ಗಿಂತ ಹೆಚ್ಚು ಮಂದಿ ಹಾಡನ್ನು ವೀಕ್ಷಿಸಿದ್ದಾರೆ.
ಸರಿ, ಬಸಣ್ಣಿ ಹಾಡನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ವಾದ್ರಾ ಅವರ ವರ್ಶನ್ ನಲ್ಲಿ ಹೇಳಿದರೆ ಹೇಗಿರುತ್ತೇ..?
ಪ್ರಿಯಾಂಕಾ ವಾದ್ರ ಅಥವಾ ಪ್ರಿಯಾಂಕಾ ಗಾಂಧಿ ಈಗ ಎಐಸಿಸಿಯ ಉತ್ತರ ಪ್ರದೇಶದ ಪೂರ್ವವಲಯದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣಾ ಹತ್ತಿರದಲ್ಲಿ ಪ್ರಿಯಾಂಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ.
ಈ ಎಳೆಯನ್ನು ಇಟ್ಟುಕೊಂಡು ‘ಬಸಣ್ಣಿ ‘ ಹಾಡನ್ನು ರಾಹುಲ್ ಗಾಂಧಿ + ಪ್ರಿಯಾಂಕ ವರ್ಶನ್ ನಲ್ಲಿ ಮಾಡಿದ್ದಾರೆ..! ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಕಾಂಗ್ರೆಸ್ ಗೆಲ್ಸ ಬೇಕು ಅಂತ ನಾನು ಇಲ್ಲಿಗೆ ಬಂದೀನಿ…ಯೋಗಿ ನಾಡಿನಲ್ಲಿ ಸೀರೆ ಉಟ್ಟು ಕೈಯಾ ಬೀಸಿನಿ…’ ಅನ್ನೋ ಪ್ರಿಯಾಂಕ…’ತಂಗಿ ನೀನು ಬಂದು ನನ್ನ ಕೆಲ್ಸ ಬಹಳಾ ಸುಲಭಾಯ್ತು..ಆದ್ರೆ, ಗೆದ್ದೇ ಬಿಟ್ರೆ ಪಿಎಂ ಸೀಟನ್ನು ನಂಗೆ ಕೊಟ್ರಾಯ್ತು…’ ಎಂಬ ಸಾಲುಗಳಿರೋ ಈ ಹಾಡು ಈ ಫೇಸ್ ಬುಕ್, ವಾಟ್ಸಪ್ ತುಂಬೆಲ್ಲಾ ಹರಿದಾಡ್ತಿದೆ. ನೀವಿನ್ನೂ ನೋಡಿಲ್ಲ ಅಂತಾದ್ರೆ ಈ ಹಾಡು ಇಲ್ಲದೆ ನೋಡಿ…ಸಕತ್ ಫನ್ನಿಯಾಗಿದೆ…ತಮಾಷೆಯಾಗಿ ತಗೋಳಿ ಅಷ್ಟೇ..
ರಾಹುಲ್ ಗಾಂಧಿ-ಪ್ರಿಯಾಂಕ ವರ್ಶನ್ ನಲ್ಲಿ ‘ಬಸಣ್ಣಿ’ ಸಾಂಗ್.!
Date: