ಲೋಕಸಭೆ ಚುನಾವಣೆ ಅಬ್ಬರದ ಮಧ್ಯೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪೌರತ್ವದ ಬಗ್ಗೆ ಚರ್ಚೆಯಾಗ್ತಿದೆ. ರಾಹುಲ್ ಗಾಂಧಿ ಬ್ರಿಟನ್ ಪೌರತ್ವ ಹೊಂದಿದ್ದಾರೆ ಎಂಬ ದೂರಿನ ಮೇಲೆ ಗೃಹ ಸಚಿವಾಲಯ ರಾಹುಲ್ ಗಾಂಧಿಗೆ ನೊಟೀಸ್ ನೀಡಿದೆ. 15 ದಿನಗಳೊಳಗೆ ಉತ್ತರ ನೀಡುವಂತೆ ಹೇಳಿದೆ. ಇದಕ್ಕೆ ರಾಹುಲ್ ಗಾಂಧಿ ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಚಾರ ರ್ಯಾಲಿ ವೇಳೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ಇದೊಂದು ಅಸಂಬದ್ಧ ಆರೋಪ ಎಂದಿದ್ದಾರೆ. ಇಡೀ ದೇಶಕ್ಕೆ ರಾಹುಲ್ ಗಾಂಧಿ ಭಾರತೀಯ ಎಂಬುದು ಗೊತ್ತು. ಇಲ್ಲಿಯೇ ಹುಟ್ಟಿ ಬೆಳೆದು ದೊಡ್ಡವರಾದ ಅವ್ರು ಭಾರತೀಯ ಎಂಬುದು ಎಲ್ಲರಿಗೂ ಗೊತ್ತು. ಇದೊಂದು ಬಕ್ವಾಸ್. ಇಂಥ ಅಸಂಬದ್ಧವನ್ನು ನಾನು ಎಂದೂ ಕೇಳಿರಲಿಲ್ಲ ಎಂದು ಪ್ರಿಯಾಂಕಾ ಹೇಳಿಕೆ ನೀಡಿದ್ದಾರೆ.