ಅನರ್ಹ ಶಾಸಕ ರೋಷನ್ ಬೇಗ್ ಚುನಾವಣೆಯಿಂದ ಹಿಂದೆ ಸರಿದಿರುವ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಮುಸ್ಲಿಮರು, ದಲಿತರು, ತಮಿಳರ ಮತ ಕ್ರೋಡೀಕರಣಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಪರೋಕ್ಷವಾಗಿ ಬಿಜೆಪಿ ಬೆಂಬಲಿಸಲು ರೋಷನ್ ಬೇಗ್ ಬೆಂಬಲಿಗರು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ರೋಷನ್ ಬೇಗ್ ಅವರು ಕಾಂಗ್ರೆಸ್ ಬಿಡಲು ರಿಜ್ವಾನ್ ಅರ್ಷದ್ ಅವರೇ ಕಾರಣ. ರಿಜ್ವಾನ್ ಅರ್ಷದ್ ಸೋತರೆ ಶಿವಾಜಿನಗರದಿಂದ ಔಟ್ ಆಗ್ತಾರೆ. ನಂತರ ರಾಜಕೀಯ ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಬಹುದು ಎಂಬ ಲೆಕ್ಕಾಚಾರ ರೋಷನ್ ಬೇಗ್ ಬೆಂಬಲಿಗರು ಅಂದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.