ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ವಿವಿಧ ಹೊಸ ಕೆಲಸಗಳಿಂದ ಒಳ್ಳೆಯ ಹೆಸರನ್ನು ಮಾಡುತ್ತಿದ್ದಾರೆ. ಇವರ ನೇತೃತ್ವದ ಸರ್ಕಾರದ ಅಡಿಯಲ್ಲಿ ಒಂದೇ ದಿನಕ್ಕೆ 1.26 ಲಕ್ಷ ಜನರಿಗೆ ಸರ್ಕಾರಿ ಕೋಟೆಯನ್ನು ನೀಡುವುದರ ಮೂಲಕ ಹಕ್ಕು ರೆಕಾರ್ಡ್ ಬರೆದಿದ್ದಾರೆ.
ಗ್ರಾಮ ಮತ್ತು ವಾರ್ಡ್ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿ ಲಿಖಿತ ಪರೀಕ್ಷೆ ನಡೆಸುವುದರ ಮೂಲಕ ಇಷ್ಟು ದೊಡ್ಡ ಮಟ್ಟದ ಜನರಿಗೆ ಉದ್ಯೋಗವನ್ನು ನೀಡಲಾಗಿದೆ. ಇನ್ನು ಅರ್ಜಿ ಆಹ್ವಾನಿಸಿದ್ದ ಹುದ್ದೆಗಳಿಗೆ ಒಟ್ಟು 21 ಲಕ್ಷ ಜನರು ಅರ್ಜಿಯನ್ನು ಸಲ್ಲಿಸಿದ್ದು ಅದರಲ್ಲಿ 1.26 ಲಕ್ಷ ಜನರಿಗೆ ಲಿಖಿತ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಉದ್ಯೋಗವನ್ನು ಕಲ್ಪಿಸಲಾಗಿದೆ. ಇನ್ನು ಮುಂಬರುವ ಜನವರಿ ತಿಂಗಳಿನಿಂದ ಪ್ರತಿ ವರ್ಷವೂ ಸಹ ಈ ರೀತಿಯ ವಿವಿಧ ಇಲಾಖೆಗಳ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುವುದು ಎಂದು ಸಹ ಸರ್ಕಾರ ತಿಳಿಸಿದೆ.