ರೆಕ್ಸ್’ ಚಿತ್ರಮಂದಿರ ಇನ್ನು ನೆನಪು ಮಾತ್ರ..!!
ಬೆಂಗಳೂರಿನಲ್ಲಿ ಹಲವು ಸಿಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ.. ಆ ಜಾಗದಲ್ಲಿ ದೊಡ್ಡ ದೊಡ್ಡ ಮಾಲ್ ಗಳು ತಲೆ ಎತ್ತುತ್ತಿವೆ.. ಅದೇ ಸಾಲಿಗೆ ಈಗ ಬ್ರಿಗೇಡ್ ರಸ್ತೆಯಲ್ಲಿರುವ ರೆಕ್ಸ್ ಚಿತ್ರಮಂದಿರ ಕೂಡ ಸೇರಿಕೊಳ್ತಿದೆ.. ಹೌದು, ಈಗ ಇತಿಹಾಸದ ಪುಟ ಸೇರಿಕೊಳ್ತಿದೆ ಹಲವು ಭಾಷೆಗಳ ಸಿನಿಮಾಗಳ ಬಿಡುಗಡೆಗೆ ಸಾಕ್ಷಿಯಾಗಿದ್ದ ರೆಕ್ಸ್ ಚಿತ್ರಮಂದಿರ..
ನಿನ್ನೆ ರಾತ್ರಿ 10 ಗಂಟೆಗೆ ಪ್ರದರ್ಶನಗೊಂಡ ಕೆಜಿಎಫ್ ಇಲ್ಲಿನ ಕೊನೆ ಷೋ ಆಗಿದೆ.. ರೆಕ್ಸ್ ಮಾಲೀಕ ಹಾಗು ಪ್ರೆಸ್ಟೀಜ್ ಸಂಸ್ಥೆ ಜಂಟಿಯಾಗಿ ಈ ಜಾಗದಲ್ಲಿ ಮಾಲ್ ನಿರ್ಮಾಣ ಮಾಡಲಿದೆ.. 2021 ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.. 1940 ರಲ್ಲಿ ರೆಕ್ಸ್ ಚಿತ್ರಮಂದಿರ ಆರಂಭಗೊಂಡಿತ್ತು.. ಅಲ್ಲಿಂದ ಇಲ್ಲಿವರೆಗು ಹಲವು ಭಾಷೆಗೆ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿದೆ..