ರೆಸಾರ್ಟ್ ನಿಂದ ಹೊರ ಹೋಗಲು ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಪ್ರಯತ್ನ ನಡೆಸಿದ್ದಾರೆ. ದೇವನಹಳ್ಳಿ ಸಮೀಪದ ಪ್ರಕೃತಿ ರೆಸಾರ್ಟ್ ನಿಂದ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಹೊರ ಹೋಗಲು ವಿಫಲ ಯತ್ನ ನಡೆಸಿದ್ದಾರೆ.
ಸಂಗಮೇಶ್ ಸೇರಿದಂತೆ ಕಾಂಗ್ರೆಸ್ ಶಾಸಕರನ್ನೆಲ್ಲಾ ಕಳೆದ ವಾರದಿಂದ ರೆಸಾರ್ಟ್ ನಲ್ಲಿ ಇರಿಸಲಾಗಿದೆ. ಆಪರೇಷನ್ ಕಮಲ ಭೀತಿಯಿಂದಾಗಿ ಶಾಸಕರು ಒಂದೇ ಕಡೆ ಇರುವಂತೆ ನೋಡಿಕೊಳ್ಳಲಾಗಿದೆ.ಅಲ್ಲದೇ, ಶಾಸಕರ ಮೇಲೆ ನಿಗಾ ವಹಿಸಲಾಗಿದೆ.
ಪ್ರಕೃತಿ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ತಂಗಿದ್ದು, ಸಂಗಮೇಶ್ ಅಲ್ಲಿಂದ ಹೊರ ಹೋಗಲು ಯತ್ನಿಸಿದ್ದಾರೆ. ಅವರ ಹಿಂದೆ ಫಾಲೋ ಮಾಡಿದ ಕಾಂಗ್ರೆಸ್ ಮುಖಂಡರು ಸಂಗಮೇಶ್ ಪ್ರಯತ್ನ ವಿಫಲಗೊಳಿಸಿದ್ದಾರೆ.
ಅಲ್ಲಿಂದ ಹೋಗಲಾರದೆ ಸಂಗಮೇಶ್ ಒಳಗೆ ಆಗಮಿಸಿದ್ದಾರೆ. ರೆಸಾರ್ಟ್ ಒಳಗೆ ಮತ್ತು ಹೊರಗೆ ಹೋಗಲು ನಿರ್ಬಂಧ ಹೇರಲಾಗಿದೆ. ಆಯ್ದ ಮುಖಂಡರು, ಶಾಸಕರಿಗೆ ಮಾತ್ರ ಹೊರಗೆ, ಒಳಗೆ ಹೋಗಲು ಅವಕಾಶವಿದೆ. ಇಂತಹ ಸಂದರ್ಭದಲ್ಲಿ ಸಂಗಮೇಶ್ ಹೊರಗೆ ಹೋಗಲು ಯತ್ನಿಸಿದ್ದರಿಂದ ಅವರನ್ನು ಮುಖಂಡರು ತಡೆದಿದ್ದಾರೆ ಎನ್ನಲಾಗಿದೆ.