ರೇಖಾ ಕದಿರೇಶ್ ಹತ್ಯೆಗೆ ಕಾರಣಗಳು ಬಯಲು

Date:

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಪೊಲೀಸರ ತನಿಖೆಯಲ್ಲಿ ಕೊಲೆಯ ಅಸಲಿಯತ್ತು ಬಹಿರಂಗಗೊಂಡಿದೆ.
ರೇಖಾ ಕದಿರೇಶ್ ಕೊಲೆಗೆ ಪೀಟರ್ ಪ್ಲಾನ್ ಮಾಡಿರುವುದನ್ನು ಪೊಲೀಸ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ಪೀಟರ್‌ನನ್ನು ರೇಖಾ ಕದಿರೇಶ್ ನಿರ್ಲಕ್ಷಿಸಿದ್ದಕ್ಕೆ ಕೊಲೆಗೆ ಪ್ರಮುಖ ಕಾರಣವಾಗಿದೆ.
ಕದಿರೇಶ್‌ನ ಕೊಲೆ ಮಾಡಿಸಿದ್ದೆ ರೇಖಾ!
ಮಾಜಿ ಕಾರ್ಪೋರೇಟರ್ ರೇಖಾ ಪತಿ ಕದಿರೇಶ್‌ನನ್ನು ಕೊಲೆ ಮಾಡಿಸಿದ್ದೇ ರೇಖಾ ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪೀಟರ್ ಹೇಳಿಕೆ ಕೇಳಿ ಪೊಲೀಸರು ಬೆಚ್ಚಿಬಿದ್ದಿದ್ದು, ಮಾಜಿ ಕಾರ್ಪೋರೇಟರ್ ಹತ್ಯೆ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಪೀಟರ್‌ನ ಆ ಒಂದು ಹೇಳಿಕೆ ತನಿಖೆಯ ದಿಕ್ಕನ್ನೇ ಬದಲಿಸಿದೆ.

ಕಳೆದ ಒಂದೂವರೆ ವರ್ಷದಿಂದ ಪೀಟರ್‌ನನ್ನು ರೇಖಾ ಕದಿರೇಶ್ ದೂರವಿಟ್ಟಿದ್ದರು. ಪೀಟರ್ ಇತ್ತೀಚೆಗೆ ಮನೆಕಟ್ಟಲು ಮುಂದಾಗಿದ್ದು, ಈ ವೇಳೆ ಹಣದ ಸಹಾಯಕ್ಕಾಗಿ ರೇಖಾ ಬಳಿ ಪೀಟರ್ ಹಣ ಕೇಳಿದ್ದನು.
ಪೀಟರ್ ಎಷ್ಟೇ ಕೇಳಿದರೂ, ಬೇಡಿದರೂ ರೇಖಾ ಒಂದೇ ಒಂದು ರೂಪಾಯಿ ಕೊಟ್ಟಿರಲಿಲ್ಲ. ಕದಿರೇಶ್‌ನ ಹಂತಕರನ್ನು ಕೊಂದು ಸ್ವಾಮಿನಿಷ್ಠೆ ತೋರಿದ್ದ ಪೀಟರ್‌ನನ್ನೇ ರೇಖಾ ನಿರ್ಲಕ್ಷಿಸಿದ್ದಳು ಎನ್ನಲಾಗಿದೆ.
ಪೀಟರ್ & ಟೀಂನ ಬಿಟ್ಟು ವಿನೋದ್ ಹಾಗೂ ಆತನ ಹುಡುಗರನ್ನು ರೇಖಾ ಜೊತೆಗಿಟ್ಟುಕೊಂಡಿದ್ದರು. ಅಲ್ಲದೇ ಇತ್ತ ಪೀಟರ್ ಹಾಗೂ ಕದಿರೇಶ್‌ನ ಸಂಬಂಧಿಗಳನ್ನನ್ನು ನಿರ್ಲಕ್ಷಿಸಿದ್ದರು. ಅಷ್ಟರಲ್ಲಿ ಮಾಲಾ ಸೊಸೆ ಪೂರ್ಣಿಮಾರನ್ನು ಚುನಾವಣೆಗೆ ನಿಲ್ಲಿಸಲು ಕದಿರೇಶ್ ಫ್ಯಾಮಿಲಿ ಸಜ್ಜಾಗಿತ್ತು. ಆದರೆ ಇದಕ್ಕೊಪ್ಪದೆ ತಾನೆ ಚುನಾವಣೆಗೆ ನಿಲ್ಲುವುದಾಗಿ ರೇಖಾ ಕದಿರೇಶ್ ಹೇಳಿಕೆ ಕೊಟ್ಟಿದ್ದರು.


5) ಕಳೆದ ಒಂದುವರೆ ವರ್ಷದಿಂದ ಒಂದೇ ಒಂದು ರೂಪಾಯಿ ನೀಡದ ರೇಖಾ
ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮತ್ತೊರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೀಟರ್‌ಗೆ ಸಹಾಯ ಮಾಡಿದ್ದ ರಾಜೇಶ್‌ನನ್ನು ಬಂಧಿಸಿದ್ದಾರೆ.
31ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶ ಹೊರಬಂದಿದ್ದು, ಸ್ಟಿಫನ್, ಅಜಯ್, ಪುರುಷೋತ್ತಮ್‌ಗೆ 14 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮಾಲಾ ಮತ್ತು ಮಾಲಾ ಸೊಸೆ ಪೂರ್ಣಿಮಾ ವಿಚಾರಣೆ ನಡೆಸಲಾಗುತ್ತಿದ್ದು, ಬೆಳಗ್ಗೆಯಿಂದಲೂ ವಿಚಾರಣೆ ಪೊಲೀಸರು ಮಾಡುತ್ತಿದ್ದಾರೆ. ಇದೀಗ ಇಬ್ಬರನ್ನು ಬೇರೆಡೆಗೆ ಶಿಫ್ಟ್ ಮಾಡಿದ್ದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ಪೊಲೀಸರು ನಡೆಸಲಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...