ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಲಕ್ಷ್ಮಣ ಸಬದಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ರೇಣುಕಾಚಾರ್ಯ, ಈ ಶಾಸಕರುಗಳ ರಾಜೀನಾಮೆಯಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಲಕ್ಷ್ಮಣ ಸವದಿಗೆ ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ ಎಂದು ಹೇಳಿದ್ದರು.
ಇದಕ್ಕೆ ಲಕ್ಷ್ಮಣ ಸವದಿಅವರು ತಿರುಗೇಟು ನೀಡಿದ್ದಾರೆ, ರೇಣುಕಾಚಾರ್ಯ ನಮ್ಮ ಸಮಾಜದ ಗುರು. ಅವರು ಹಿರಿಯ ಶಾಸಕರು. ನನ್ನ ಬಗ್ಗೆ ಅವರು ಏನೇ ಹೇಳಿದರೂ ಆಶೀರ್ವಾದವಿದ್ದಂತೆ ಎಂದು ವ್ಯಂಗ್ಯವಾಗಿ ಹೇಳಿದರು .