ರೇಣುಕಾಸ್ವಾಮಿ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳು
ಬೆಂಗಳೂರು: ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿ ಇಂದು ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇಂದು ಎಲ್ಲಾ ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದಾರೆ. ಕೋರ್ಟ್ ಗೆ ಹಾಜರು ಆಗುವಾಗ ದರ್ಶನ್ ಮತ್ತು ಪವಿತ್ರಾಗೌಡ ಮುಖಾಮುಖಿಯಾಗಿದ್ದಾರೆ. ಪ್ರತಿ ವಿಚಾರಣೆ ವೇಳೆ ಹಾಜರಾಗಲು ಹೈಕೋರ್ಟ್ ಈಗಾಗಲೇ ಸೂಚಿಸಿದೆ. ಜಾಮೀನು ನೀಡುವಾಗ ಹಲವು ಷರುತ್ತಗಳನ್ನು ಹೈಕೋರ್ಟ್ ವಿಧಿಸಿತ್ತು. ಈ ಹಿನ್ನೆಲೆ ಇಂದು ಸೆಷನ್ಸ್ ಕೋರ್ಟ್ಗೆ ಆರೋಪಿಗಳು ಹಾಜರಾಗಿದ್ದಾರೆ. ಗೈರಾದರೆ ಸೂಕ್ತ ಕಾರಣ ನೀಡಿ ವಿನಾಯಿತಿ ಕೋರಬೇಕಾಗಿದೆ.
ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳು ಆರೋಪಿಗಳು ಕೋರ್ಟ್‌ಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಅದರಂತೆ ಶುಕ್ರವಾರ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಆಗಲು ದಿನಾಂಕ ನಿಗಧಿ ಮಾಡಲಾಗಿತ್ತು. ಹಾಗಾಗಿ ಇಂದು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.