ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರೇವಣ್ಣ ಅವರು ಜನರಿಗಾಗಿ ದೇವರ ಮೊರೆ ಹೋಗಲ್ಲ. ಅವರು ತಮ್ಮ ಸ್ವಾರ್ಥಕ್ಕೆ, ತಮ್ಮ ಕುಟುಂಬಕ್ಕೆ ವಾಮಚಾರ ಮಾಡುತ್ತಾರೆ. ಅವರ ವಾಮಾಚಾರ ದೇವೇಗೌಡರನ್ನು ಬಲಿಕೊಟ್ಟಿತು. ನಾಳೆ ಕುಮಾರಸ್ವಾಮಿಯವರನ್ನು ಕೂಡ ಬಲಿ ಕೊಡುತ್ತದೆ ಎಂದು ಲೇವಡಿ ಮಾಡಿದ್ದಾರೆ.
ನಾಳೆ ರಾಜ್ಯದ ಮೈತ್ರಿ ಸರ್ಕಾರ ಅಂತ್ಯವಾಗುತ್ತೆ. ಶ್ರದ್ಧಾಂಜಲಿ ಅರ್ಪಿಸುತ್ತೇವೆ. ಇನ್ನಾದರೂ ಮಾನ್ಯ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ಹೋಗಲಿ, ಭಾರತೀಯ ಜನತಾ ಪಾರ್ಟಿಗೆ ಬಹುಮತ ಸಿಕ್ಕಿ ಸರ್ಕಾರ ರಚನೆ ಮಾಡುತ್ತದೆ.ಈಗಾಗಲೇ ನಾಗೇಶ್ ಮತ್ತು ಶಂಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂದರು.