ರೋಸ್ ವಾಟರ್ ಖರೀದಿಸಲು ದುಡ್ಡು ವೆಸ್ಟ್ ಮಾಡ್ಬೇಡಿ! ಮನೆಯಲ್ಲೇ ಹೀಗೆ ಮಾಡಿ!
ಚರ್ಮದ ರಕ್ಷಣೆಯಲ್ಲಿ ರೋಸ್ ವಾಟರ್ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ವಿಚಾರ ಕೆಲವರಿಗೆ ಮಾತ್ರ ಗೊತ್ತು. ರೋಸ್ ವಾಟರ್ ನಮ್ಮ ಸೌಂದರ್ಯವರ್ಧನೆಗೆ ಬಹಳ ಉಪಯುಕ್ತವಾಗಿದೆ. ಅನೇಕ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಕೂಡಾ ರೋಸ್ ವಾಟರ್ ಬಳಸಲಾಗುತ್ತದೆ. ರೋಸ್ ವಾಟರ್ ಉತ್ತಮ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ನಾನಾ ಸಮಸ್ಯೆಗಳಿಂದ ಚರ್ಮವನ್ನು ರಕ್ಷಿಸುತ್ತದೆ.
ರೋಸ್ ವಾಟರ್ ಅನ್ನು ಸೌಂದರ್ಯವರ್ಧಕಗಳಲ್ಲಿ ಇತ್ತೀಚೆಗಂತೂ ವ್ಯಾಪಕವಾಗಿ ಬಳಸಲಾಗುತ್ತದೆ. ಫೇಸ್ ಪ್ಯಾಕ್‌ಗಳನ್ನು ತಯಾರಿಸುವುದರಿಂದ ಹಿಡಿದು ಅದನ್ನು ಟೋನರ್ ಆಗಿ ಬಳಸಲು ಹಾಗೂ ಮೇಕಪ್ ತೆಗೆಯಲು ಸಹ ಬಳಸಲಾಗುತ್ತದೆ. ಆದರೆ ಈಗ ನೀವು ಮನೆಯಲ್ಲಿಯೇ ತಯಾರಿ ಮಾಡ್ಬಹುದು.
ರೋಸ್ ವಾಟರ್ ಚರ್ಮದ ಸಮಸ್ಯಯನ್ನು ನಿವಾರಿಸುತ್ತದೆ ಜೊತೆಗೆ ಪಿಹೆಚ್ ಮಟ್ಟವನ್ನು ಸರಿಯಾಗಿ ಇರಿಸುತ್ತದೆ. ರೋಸ್ ವಾಟರ್ ಅನ್ನು ಮೇಕಪ್ ರಿಮೂವರ್ ಮತ್ತು ಮೇಕಪ್ ಸೆಟ್ಟಿಂಗ್ ಸ್ಪ್ರೇ ಆಗಿಯೂ ಬಳಸಬಹುದು.
ಇನ್ನು ಪ್ರತಿದಿನ ಮುಖಕ್ಕೆ ರೋಸ್ ವಾಟರ್ ಹಚ್ಚಿಕೊಂಡು ಮಲಗಿದರೆ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡಬಹುದು. ಜೊತೆಗೆ ಮುಖದ ಮೇಲಿರುವಂತಹ ಮೊಡವೆಗಳು. ಕಪ್ಪು ಕಲೆಗಳನ್ನು ಮಾಯವಾಗುವಂತೆ ಮಾಡುತ್ತದೆ. ಇನ್ನು ಕಣ್ಣಿನ ಸುತ್ತಲಿರುವ ಡಾರ್ಕ್ ಸರ್ಕಲ್ಗಳನ್ನೂ ಹೋಲಾಡಿಸಬಹುದು.
ರೋಸ್ ವಾಟರ್ ತಯಾರಿಸುವ ವಿಧಾನ: ಮೊದಲಿಗೆ 2 ಗುಲಾಬಿಗಳನ್ನು ತೆಗೆದುಕೊಂಡು ಅವುಗಳಿಂದ ದಳಗಳನ್ನು ತೆಗೆಯಬೇಕು. ನಂತರ ಆ ದಳಗಳ ಧೂಳು ತೆಗೆಯಲು ಅವುಗಳನ್ನು ನೀರಿನ ಮೂಲಕ ತೊಳೆಯಿರಿ. ನಂತರ ಒಂದು ಪಾತ್ರೆಯಲ್ಲಿ ಎರಡು ಲೋಟದಷ್ಟು ಬಿಸಿ ನೀರನ್ನು ಕುದಿಸಿ.
ನೀರು ಬಿಸಿಯಾದ ಬಳಿಕ, ಆ ಬಿಸಿ ನೀರಿಗೆ ಗುಲಾಬಿ ದಳಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮುಚ್ಚಿಡಿ. ನೀರು ತಣ್ಣಗಾದ ಬಳಿಕ ಆ ನೀರನ್ನು ಚೆನ್ನಾಗಿ ಸೋಸಿ ಒಂದು ಬಾಟಲಿಯಲ್ಲಿ ತುಂಬಿಡಿ. ಇದನ್ನು ಫ್ರಿಡ್ಜ್ನಲ್ಲೂ ಇಡಬಹುದು. ಇದರಿಂದ ರೋಸ್ ವಾಟರ್ ತಂಪಾಗಿರುತ್ತದೆ.
ಇನ್ನು ಈ ರೋಸ್ ವಾಟರ್ ಅನ್ನು ಮುಖದಲ್ಲಿ ಉರಿಯೂತವಿದ್ದಾಗಲು ಬಳಕೆ ಮಾಡಬಹುದು. ಇದು ನಿಮ್ಮ ಮುಖವನ್ನು ತೇವವಾಗುವಂತೆ ಮಾಡುತ್ತದೆ.
ಈ ರೋಸ್ ವಾಟರ್ಗಳು ಬಳಕೆದಾರರಿಗೆ ಬಹಳಷ್ಟು ರೀತಿಯಲ್ಲಿ ಉಪಯೋಗವಾಗುತ್ತದೆ. ಅದ್ರಲ್ಲೂ ಮಹಿಳೆಯರಿಗೆ ಮೇಕಪ್ ಮಾಡುವ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ. ಇದಲ್ಲದೆ ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಗುಣಲಕ್ಷಣಗಳು, ಮೊಡವೆ, ಚರ್ಮದ ಕೆಂಪು ಇವುಗಳನ್ನೆಲ್ಲಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ.