ಕೇಂದ್ರ ಸರ್ಕಾರದ ನೂತನ ಕೃಷಿ ಕಾಯಿದೆ ವಿರುದ್ಧ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನೂ ರೈತರ ಪ್ರತಿಭಟನೆ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಇದೀಗ ಚರ್ಚೆಗೆ ಕಾರಣವಾಗಿದೆ. ಪಾಪ್ ಗಾಯಕಿ ರಿಹಾನ್ನ ಅವರು ಸಹ ಈ ಕುರಿತಾಗಿ ಟ್ವೀಟ್ ಮಾಡುವ ಮೂಲಕ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ.
ರಿಹನ್ನಾ ಟ್ವೀಟ್ ಬಳಿಕ ಎಚ್ಚೆತ್ತ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಭಾರತೀಯ ಕ್ರಿಕೆಟಿಗರು ಟ್ವಿಟ್ಟರ್ ನಲ್ಲಿ ‘ಇಂಡಿಯಾ ಟುಗೆದರ್’ ಎಂಬ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ನಮ್ಮ ದೇಶದ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಹೊರಗಿನವರು ಇದರ ಕುರಿತು ಬರುವುದು ಬೇಡ ಎಂದು ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದರು.
ಹೀಗೆ ಇಂಡಿಯಾ ಟುಗೆದರ್ ಟಾಪಿಕ್ ಅಡಿಯಲ್ಲಿ ರೋಹಿತ್ ಶರ್ಮಾ ಅವರು ಸಹ ಟ್ವೀಟ್ ಮಾಡಿದ್ದರು ಇದಕ್ಕೆ ರಿಪ್ಲೈ ಕೊಡಲು ಹೋಗಿ ನಟಿ ಕಂಗನಾ ರಣಾವತ್ ಅವರು ರೋಹಿತ್ ಶರ್ಮಾ ಅವರಿಗೆ ನಾಯಿ ಎಂದು ಕರೆದು ಬಿಟ್ಟಿದ್ದಾರೆ. ಹೌದು ರೋಹಿತ್ ಶರ್ಮಾ ಅವರ ಟ್ವೀಟ್ ಗೆ ರಿಪ್ಲೈ ಮಾಡಲು ಹೋಗಿ ನಟಿ ಕಂಗನಾ ರಣಾವತ್ ಅವರು ಭಾರತೀಯ ಕ್ರಿಕೆಟಿಗರು ನಾಯಿಗಳು ಎಂದು ಹೇಳುವ ಮೂಲಕ ದೊಡ್ಡ ಅವಾಂತರ ಸೃಷ್ಟಿಸಿದ್ದಾರೆ.
ಸದಾ ಕಾಂಟ್ರವರ್ಸಿ ಯಲ್ಲಿಯೇ ಮುಳುಗಿರುವ ನಟಿ ಕಂಗನಾ ರಣಾವತ್ ಅವರು ಇದೀಗ ಮತ್ತೊಂದು ದೊಡ್ಡ ಕಾಂಟ್ರವರ್ಸಿಯನ್ನ ಸೃಷ್ಟಿಸಿದ್ದಾರೆ. ಕಂಗನಾ ಮಾಡಿದ ಟ್ವೀಟ್ ಇದೀಗ ಮಾಯವಾಗಿದ್ದು ಕ್ರಿಕೆಟ್ ಅಭಿಮಾನಿಗಳು ಮತ್ತು ರೋಹಿತ್ ಶರ್ಮಾ ಫ್ಯಾನ್ಸ್ ಕಂಗನಾ ರಣಾವತ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.