ಟೀಂ ಇಂಡಿಯಾದ ನಾಯಕ ಕಿಂಗ್ ವಿರಾಟ್ ಕೊಹ್ಲಿ ಇಂಗ್ಲೆಂಡಿನ ಬೀದಿಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ಸುತ್ತಾಡುತ್ತಿರುವ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ ಈ ಫೋಟೋವನ್ನು ಅವರ ಅಭಿಮಾನಿಗಳು ತಮ್ಮ ಫ್ಯಾನ್ ಪೇಜ್ ನಲ್ಲಿ ಹಂಚಿಕೊಳ್ಳುವ ಮೂಲಕ ಖುಷಿ ಪಟ್ಟಿದ್ದಾರೆ.
ಈ ವೇಳೆ ಅನುಷ್ಕಾ ಮೆರೂನ್ ಹಾಗೂ ಬಿಳಿ ಬಣ್ಣದ ಉಡುಪು ಧರಿಸಿದ್ದು, ವಿರಾಟ್ ಜೀನ್ಸ್ ಮತ್ತು ಜ್ಯಾಕೇಟ್ ಧರಿಸಿದ್ದು ಇವರ ಲುಕ್ ಎಲ್ಲರ ಗಮನ ಸೆಳೆಯುವಂತಿದೆ ಅಲ್ಲದೆ ಅನುಷ್ಕಾ ಶರ್ಮಾ ಹೊಸ ಹೈರ್ ಸ್ಟೈಲ್ ಮೇಲೆ ಕೂಡಾ ಅಭಿಮಾನಿಗಳ ಕಣ್ಣು ಬಿದ್ದಿದೆ.
ಇದೀಗ ವಿರಾಟ್, ಅನುಷ್ಕ ಅಭಿಮಾನಿಗಳು ಈ ಫೋಟೋ ಅಪ್ಲೋಡ್ ಮಾಡಿ ‘ಲಂಡನ್‍ನ ಓಲ್ಡ್ ಬಾಂಡ್ ಸ್ಟ್ರೀಟ್ ಅನುಷ್ಕಾ, ವಿರಾಟ್’ ಎಂದು ಬರೆದುಕೊಂಡಿದ್ದಾರೆ.
ಭಾರತ ತಂಡ 2019 ರ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ 89 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆಫ್ಘಾನಿಸ್ತಾನವನ್ನು ಎದುರಿಸಲಿದೆ.