ಲಾಕ್‌ಡೌನ್ ಸಮಯದಲ್ಲಿ ಮನಸ್ಸಿಗೆ ನೆಮ್ಮದಿ ಕೊಡುವ ಸಿನಿಮಾಗಳಿವು

1
71

‘ಸಿನಿಮಾ’ ಕೇವಲ ಮನರಂಜನೆಯ ವಸ್ತುವಲ್ಲ.. ಸಿನಿಮಾದಿಂದ ಪ್ರೇರೇಪಿತರಾಗಿ ಬದುಕನ್ನೇ ಬದಲಾಯಿಸಿಕೊಂಡ ಅದೆಷ್ಟೋ ಜನರಿದ್ದಾರೆ.. ದಿನನಿತ್ಯದ ಜಂಜಾಟದಲ್ಲಿ ತಲೆಬಿಸಿ ಆಗಾಗ, ಕೆಲಸದ ಒತ್ತಡದಿಂದ ಉದ್ವೇಗಕ್ಕೊಳಗಾದ ಹಲವಾರು ಮಂದಿ ತಲೆ ಕೆಟ್ಟೋಗಿದೆ ಗುರು ಒಂದೊಳ್ಳೆ ಸಿನಿಮಾ ನೋಡಬೇಕು ಎಂದು ಚಿತ್ರಮಂದಿರದತ್ತ ಹೋಗೋದು ಕಾಮನ್. ಮನರಂಜನೆಯ ಮೂಲಕ ಒಬ್ಬ ವ್ಯಕ್ತಿಯ ಮನಸ್ಸು ಮತ್ತು ಯೋಚಿಸುವ ರೀತಿಯನ್ನು ಬದಲಾಯಿಸುವ ಸಿನಿಮಾ ಮನುಷ್ಯನ ಖುಷಿ ಮತ್ತು ನೆಮ್ಮದಿಯ ಜೀವನ ದಲ್ಲಿ ಚಿಕ್ಕ ಪಾತ್ರವನ್ನಾದರೂ ನಿಭಾಯಿಸುತ್ತದೆ.

 

ಇನ್ನೂ ಪ್ರಸ್ತುತ ಲಾಕ್ ಡೌನ್ ದಿನಗಳು ಮತ್ತೆ ಆರಂಭವಾಗಿವೆ. ಕಳೆದ ವರ್ಷ ಇದೇ ರೀತಿ ಭಾರತದಾದ್ಯಂತ ಲಾಕ್ ಡೌನ್ ಆದಾಗ ಜನರು ಸಿನಿಮಾ ಮೊರೆ ಹೋದರು. ಸಿನಿಮಾ ನೋಡದವರು ಕೂಡ ಸಿನಿಮಾಗಳನ್ನು ನೋಡುವ ಹವ್ಯಾಸವನ್ನು ರೂಢಿ ಮಾಡಿಕೊಂಡರು. ಇದೀಗ ಮತ್ತೆ ಆರಂಭವಾಗಿದ್ದು ಕೊರೋನಾ ಭಯದ ನಡುವೆ ಬದುಕುತ್ತಿರುವ ಜನರಿಗೆ ಫೀಲ್ ಗುಡ್ ಸಿನಿಮಾಗಳ ಅವಶ್ಯಕತೆ ಇದೆ. ಇಂಥ ಬೇಜಾರಿನ ಸಮಯದಲ್ಲಿ ನಿಮ್ಮ ಮನಸ್ಸು ಹಗುರವಾಗಿ ಬೇಕೆಂದರೆ ಈ ಕೆಳಕಂಡ ಫೀಲ್ ಗುಡ್ ಸಿನಿಮಾ ಗಳನ್ನು ನೀವು ನೋಡುವುದು ಉತ್ತಮ..

 

 

1. ಕಥೆಯೊಂದು ಶುರುವಾಗಿದೆ :

ಕನ್ನಡದ ಕಥೆಯೊಂದು ಶುರುವಾಗಿದೆ ಸಿನಿಮಾ ಫೀಲ್ ಗುಡ್ ಸಿನಿಮಾಗಳ ಪಟ್ಟಿಗೆ ಸೇರುವಂತಹ ಸಿನಿಮಾ. ದಿಗಂತ್ ಅಭಿನಯದ ಈ ಚಿತ್ರವನ್ನು ನನಗೆ ನೆಮ್ಮದಿಯಾಗಿ ನೋಡೋಕೆ ಒಂದು ಸಿನಿಮಾ ಬೇಕಪ್ಪ ಎನ್ನುವವರು ಆರಾಮಾಗಿ ನೋಡಬಹುದು.

 

2. ಮುಂದಿನ ನಿಲ್ದಾಣ :

ಪ್ರವೀಣ್ ಶೆಟ್ಟಿ, ರಾಧಿಕಾ ಚೇತನ್ ಅಭಿನಯದ ಈ ಚಿತ್ರ ಕೂಡ ಕನ್ನಡದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಫೀಲ್ ಗುಡ್ ಚಿತ್ರಗಳಲ್ಲೊಂದು. ಈ ಸಮಯದಲ್ಲಿ ನಿಮ್ಮ ಮೈಂಡ್ ರಿಫ್ರೆಶ್ ಆಗಲು ಈ ಚಿತ್ರವನ್ನು ನೋಡುವುದು ಉತ್ತಮ.

 

3. ಕೆಮಿಸ್ಟ್ರಿ ಆಫ್ ಕರಿಯಪ್ಪ :

ತಬಲಾ ನಾಣಿ ಮತ್ತು ಸಂಜನಾ ಆನಂದ್ ಅಭಿನಯದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಕೂಡ ಈ ಲಾಕ್ ಡೌನ್ ವೇಳೆಯಲ್ಲಿ ನೋಡಲೇಬೇಕಾದಂತಹ ಸಿನಿಮಾ.

 

4. ಒಂದು ಮೊಟ್ಟೆಯ ಕಥೆ :

ರಾಜ್ ಬಿ ಶೆಟ್ಟಿ ಅಭಿನಯದ ಒಂದು ಮೊಟ್ಟೆಯ ಕಥೆ ಚಿತ್ರದ ಬಗ್ಗೆ ನೀವು ಸಾಕಷ್ಟು ಕೇಳಿರುತ್ತೀರಿ. ಚಿತ್ರ ನೋಡಿದ ಯಾವೊಬ್ಬ ಪ್ರೇಕ್ಷಕನೂ ಸಹ ಚಿತ್ರದ ಬಗ್ಗೆ ಎಲ್ಲಿಯೂ ನೆಗೆಟಿವ್ ಮಾತನಾಡಿದ ಉದಾಹರಣೆಯೇ ಇಲ್ಲ. ಎಂದ ಮೇಲೆ ಈ ಚಿತ್ರವನ್ನು ನೀವು ಇಂತಹ ಸಮಯದಲ್ಲಿ ಧಾರಾಳವಾಗಿ ನೋಡಬಹುದು.

 

5. ಚಮಕ್ :

ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಮಕ್ ಈ ಸಿನಿಮಾವನ್ನು ಹಲವಾರು ಮಂದಿ ಈಗಾಗಲೇ ನೋಡಿರುತ್ತಾರೆ. ಹಾಗಂತ ಈ ಸಿನಿಮಾವನ್ನು ಫೀಲ್ ಗುಡ್ ಸಿನಿಮಾ ಪಟ್ಟಿಯಿಂದ ಕೈ ಬಿಡಲು ಸಾಧ್ಯವೇ ಇಲ್ಲ. ಹೇಳಿಕೇಳಿ ಇದೊಂದು ಸಿಂಪಲ್ ಸುನಿ ನಿರ್ದೇಶನದ ಸಿನಿಮಾ.. ಎಂದ ಮೇಲೆ ಖಚಿತವಾಗಿಯೂ ಇದೊಂದು ಮನಸ್ಸಿಗೆ ಮುದ ನೀಡುವಂತಹ ಚಿತ್ರ ಹಾಗೆಯೇ ಇರುತ್ತದೆ.

 

ಇವುಗಳಷ್ಟೇ ಅಲ್ಲದೆ ಲವ್ ಮಾಕ್ ಟೇಲ್ & ಸ.ಹಿ.ಪ್ರಾ.ಶಾಲೆ ಕಾಸರಗೋಡು ಸಿನಿಮಾಗಳು ಕೂಡ ಇತ್ತೀಚೆಗೆ ಬಿಡುಗಡೆಗೊಂಡ ಕನ್ನಡ ಸಿನಿಮಾಗಳ ಪೈಕಿ ಮನಸ್ಸಿಗೆ ಮುದ ನೀಡುವಂತಹ ಚಿತ್ರವಾಗಿವೆ. ಈ ಸಿನಿಮಾಗಳನ್ನು ನೋಡದೆ ಇರುವವರ ಸಂಖ್ಯೆ ತೀರಾ ಕಡಿಮೆ ಎನಿಸುತ್ತದೆ. ಸದ್ಯಕ್ಕೆ ಇಷ್ಟು ಫೀಲ್ ಗುಡ್ ಕನ್ನಡ ಸಿನಿಮಾಗಳ ಪಟ್ಟಿಯನ್ನು ನಿಮ್ಮುಂದೆ ಇಟ್ಟಿದ್ದೇವೆ. ಇದೇ ರೀತಿಯ ಬೇರೆ ಬೇರೆ ಫೀಲ್ ಗುಡ್ ಕನ್ನಡ ಸಿನಿಮಾಗಳನ್ನು ನೀವು ನೋಡಿದ್ದರೆ ಇತರರಿಗೆ ನೋಡಿ ಎಂದು ಹೇಳಲು ಬಯಸಿದರೆ ಕಾಮೆಂಟ್ ಮೂಲಕ ತಪ್ಪದೆ ತಿಳಿಸಿ..

1 COMMENT

LEAVE A REPLY

Please enter your comment!
Please enter your name here