ಲಾಕ್ ಡೌನ್ ಬದುಕಿನ ಏರಿಳಿತ‌ದ ದಿ ಪೇಂಟರ್ ಚಿತ್ರ.. ATT ಪ್ಲಾಟ್ ಫಾರ್ಮ್ ನಲ್ಲಿ‌ ವಿಶ್ವದಾದ್ಯಂತ ‌ಸಿನಿಮಾ ರಿಲೀಸ್..

Date:

ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಚಿತ್ರ‌ ವೀಕ್ಷಿಸೋರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಥಿಯೇಟರ್‌ನಲ್ಲಿ ಬಿಡುಗಡೆಯಾಗೋದರ ಜೊತೆಗೆ ಆನ್‌ಲೈನ್ ನಲ್ಲಿ ಸಿನಿಮಾ ಬಿಡುಗಡೆ ‌ಮಾಡ್ತಿದ್ದಾರೆ. ಅದರಲ್ಲೂ ಲಾಕ್ ಡೌನ್ ನಿಂದಾಗಿ ಚಿತ್ರಮಂದಿರ ಬಂದ್ ಆಗಿರೋದರಿಂದಾಗಿ‌ ಒಟಿಟಿ‌ ಪ್ಲಾಟ್ ಫಾರ್ಮ್ ನಲ್ಲಿ ಫಿಲ್ಮ್ ಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಲಾ ಸಿನಿಮಾದ ಬಳಿಕ ಮತ್ತೊಂದು ಸಿನಿಮಾ‌ ಬಿಡುಗಡೆಯಾಗುತ್ತಿದೆ.

ಅಮೃತ ಫಿಲ್ಮ್ ಸೆಂಟರ್ ಮತ್ತು ಕೆ.ಕೆ. ಕಂಬೈನ್ಸ್ ಜಂಟಿಯಾಗಿ ನಿರ್ಮಾಣ ಮಾಡಿರುವ ಹಾಗೂ
ವೀಣಾ ರೆಡ್ಡಿ ನೇತೃತ್ವದ ಚಿತ್ರ “ದಿ ಪೈಂಟರ್”. ವೆಂಕಟ ಭಾರದ್ವಾಜ್ ನಟಿಸಿ ನಿರ್ದೇಶಿಸಿರುವ ದಿ ಪೈಂಟರ್ ಚಿತ್ರ ಆನ್ ಲೈನ್ ನಲ್ಲಿ ಬಿಡುಗಡೆಯಾಗುತ್ತಿದೆ. ವಿಶ್ವದಾದ್ಯಂತ ಏಕ ಕಾಲಕ್ಕೆ ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ವಿಶ್ವದಾದ್ಯಂತ ಆನ್ ಲೈನ್ ಇ ಥಿಯೇಟರ್ ಮೂಲಕ ಬಿಡುಗಡೆ ಯಾಗುತ್ತಿರುವ ಮೊಟ್ಟ ಮೊದಲ ಕನ್ನಡ ಚಲನಚಿತ್ರ ‘ದಿ ಪೈಂಟರ್’ ಚಿತ್ರ.ಶ್ರೇಯಸ್ ಎಂಟರ್ಟೈನ್ಮೆಂಟ್ ATT ಪ್ಲಾಟ್ ಫಾರ್ಮ್ ಮೂಲಕ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಚಿತ್ರಮಂದಿರಕ್ಕೆ ಜನ ಹೋಗೋಕ್ಕಾಗಲ್ಲ ಹೀಗಾಗಿ ಒಂದು ವಿನೂತನ ಚಿತ್ರ ಬಿಡುಗಡೆ ಮಾಡುವ ಯೋಜನೆಯನ್ನು ವೆಂಕಟ್ ಭಾರದ್ವಾಜ್ ಕಂಡು ಹಿಡಿದುಕೊಂಡಿದ್ದಾರೆ. ಅದುವೇ ಎಟಿಟಿ ಪ್ಲಾಟ್ ಫಾರ್ಮ್.ಇವತ್ತಿನ ಕೊರೊನಾ ಪರಿಸ್ಥಿತಿಯನ್ನು ಕೆಲವರು ಹೇಗೆ ಒಳ್ಳೆಯದಕ್ಕೆ‌ ಹಾಗೂ ಹೇಗೆ ಕೆಟ್ಟದಕ್ಕೆ ಉಪಯೋಗಿಸುತ್ತಾರೆ ಮತ್ತು ಪ್ರಯತ್ನಿಸುತ್ತಾರೆ ಎಂಬುದನ್ನು “ದಿ ಪೈಂಟರ್” ನಲ್ಲಿ ಹೇಳಲಾಗಿದೆ.ಇದು ಒಂದು ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಕಥಾ ವಸ್ತು ಹೊಂದಿದ ಹಂದರವಿರುವ ಸುಮಾರು 90 ನಿಮಿಷದ ಫೀಚರ್ ಚಿತ್ರವಾಗಿದೆ.‌

ಚೆನ್ನೈ, ಬೆಂಗಳೂರು, ಕನಕಪುರ, ಹೆಬ್ಬಾಳ, ತುಮಕೂರು ಸೇರಿದಂತೆ ಐದು‌ ಲೋಕೇಷನ್ ಗಳಲ್ಲಿ ೧೩ ದಿನಗಳ‌ ಕಾಲ ಶೂಟಿಂಗ್ ಮಾಡಲಾಗಿದೆ. ಐದು ಜನ ಕ್ಯಾಮೆರಾ ಮನ್ಸ್, 20 ಜನ ನಟರು ಮತ್ತು ತಂತ್ರಜ್ಞರನ್ನು ಬಳಸಿಕೊಳ್ಳಲಾಗಿದೆ.
ಶೂಟಿಂಗ್ ಮಾಡಲಾಗಿದೆ. ಕೈಗೆ ಲಭ್ಯವಿರುವ ವಸ್ತುಗಳನ್ನು ಬಳಸಿ, ದೊರಕಿರುವ ಪ್ರಾಪರ್ಟೀಸ್ ಗಳನ್ನು ಅಚ್ಚುಕಟ್ಟಾಗಿ ಉಪಯೋಗಿಸಿ ದಿ ಪೈಂಟರ್ ಸಿನಿಮಾ ನಿರ್ಮಾಣ ಮಾಡಿದ್ದೇವೆ.‌ ಇದು “ನ್ಯಾಚುರಲ್ ಸಿನಿಮಾ” ಎಲ್ಲವನ್ನು ನೈಜವಾಗಿ ಚಿತ್ರಿಸಲಾಗಿದೆ. ಒಂದು ಮಧ್ಯಮ ವರ್ಗದ ಕುಟುಂಬ ಹೇಗೆ ಬದುಕು ಸಾಗಿಸುತ್ತದೆ ಜೀವನದ ಏರಿಳಿತ ಎಲ್ಲವೂ ಇಲ್ಲಿ ನ್ಯಾಚುರಲ್ ಸ್ಟೈಲ್ ನಲ್ಲಿ ಶೂಟ್ ಮಾಡಲಾಗಿದೆ ಎನ್ನುತ್ತಾರೆ ವೆಂಕಟ್ ಭಾರದ್ವಾಜ್.ಕನ್ನಡ ಪ್ರೇಕ್ಷಕರು ೫೦ ರೂಪಾಯಿ ಕೊಟ್ಟು ಚಿತ್ರವನ್ನು ತಮ್ಮ ಮನೆಯಲ್ಲೇ ಕುಳಿತು ನೋಡಬಹುದು.‌ಪ್ರೇಕ್ಷಕರ ಕೊಡುವ ದುಡ್ಡಿನಲ್ಲಿ ಶೇಕಡಾ ೨೦% ರನ್ನು ಸಂಕಷ್ಟದಲ್ಲಿರುವ ಕನ್ನಡ ಚಲನಚಿತ್ರ ಕಾರ್ಮಿಕರಿಗೆ ಕುಟುಂಬಗಳಿಗೆ ಕೊಡುವ ಒಂದು ಉದ್ದೇಶ ಈ ಚಿತ್ರ ತಂಡಕ್ಕೆ ಇದೆ ಎಂದರು. ಜೊತೆಗೆ ಶೀಘ್ರದಲ್ಲಿ ಚಿತ್ರದ ಟ್ರೇಲರ್ ಮತ್ತು ಲಿರಿಕಲ್ ವಿಡಿಯೋ ಬಿಡುಗಡೆ ಗೊಳ್ಳಲಿದೆ ಅಂತಾ ಚಿತ್ರದ ನಿರ್ದೇಶಕ, ನಟ ವೆಂಕಟ್ ಭಾರದ್ವಾಜ್ ಹೇಳಿದ್ದಾರೆ..

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...