ಲಿಂಗಾಯಿತ ಸಮುದಾಯದ ಮುಖಂಡರು ಬುಧವಾರ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯದ 16 ಮಂದಿ ಶಾಸಕರಿದ್ದು, ಅವರಲ್ಲಿ ನಾಲ್ವರಿಗೆ ಸಚಿವ ಸ್ಥಾನ ಕೊಡಬೇಕೆಂದು ಮನವಿ ಮಾಡಿದ್ದಾರೆ.
ಲಿಂಗಾಯಿತ ಮುಖಂಡರು 4 ಸಚಿವ ಸ್ಥಾನ ಕೊಡಬೇಕೆಂದು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದಾಗ ಗರಂ ಆದ ಯಡಿಯೂರಪ್ಪ, 4 ಸಚಿವ ಸ್ಥಾನ ಸಾಕಾ ಅಥವಾ 5 ಬೇಕಾ ಎಂದು ಪ್ರಶ್ನಿಸಿದ್ದಾರೆ. 4 ಸಚಿವ ಸ್ಥಾನಗಳು ಸಾಕು ಎಂದು ಸಮುದಾಯದ ಮುಖಂಡರು ಹೇಳಿದ್ದು, ಈ ವೇಳೆ ಯಡಿಯೂರಪ್ಪ, ಎಲ್ಲಾ ಸಚಿವ ಸ್ಥಾನಗಳನ್ನು ನಿಮಗೆ ಕೊಟ್ಟರೆ ರಾಜೀನಾಮೆ ನೀಡಿದ 16 ಮಂದಿ ಶಾಸಕರು ವಿಷ ಕುಡಿಯಬೇಕಾ ಎಂದು ಪ್ರಶ್ನಿಸಿದ್ದಾರೆ.