ಸೋಮವಾರ ವೀರಪ್ಪ ಮೊಯ್ಲಿ ಅವರು ಕಪ್ಪು ಕೋಟು ಧರಿಸಿ ಹೈಕೋರ್ಟ್ ಗೆ ಆಗಮಿಸಿ, 2004 ರ ಪ್ರಕರಣವೊಂದರ ವಾದ ಮಂಡಿಸಿದ್ದಾರೆ. ಹೀಗಾಗಿ ವೀರಪ್ಪ ಮೊಯ್ಲಿ ರಾಜಕೀಯದಿಂದ ದೂರ ಸರಿಯಲು ನಿರ್ಧರಿಸಿದ್ದಾರಾ? ಎಂಬ ಚರ್ಚೆಗಳು ಶುರುವಾಗಿವೆ.
ನಿನ್ನೆ ಬೆಳಗ್ಗೆ ಹೈಕೋರ್ಟ್ ಗೆ ಆಗಮಿಸಿದ ವೀರಪ್ಪ ಮೊಯ್ಲಿ ಅವರು ಹಿರಿಯ ವಕೀಲ ಬಿ.ವಿ ಆಚಾರ್ಯ, ಡಿ.ಎಲ್.ಎನ್ ರಾವ್ ಜೊತೆ ಕೆಲ ಕಾಲ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ವಕೀಲ ವೃತ್ತಿಯನ್ನು ಮುಂದುವರೆಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ರಾಜಕೀಯದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ಕಾರಣಕ್ಕೆ ವಕೀಲ ವೃತ್ತಿಯಿಂದ ದೂರವಿದ್ದ ಮೊಯ್ಲಿ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಹಿನ್ನೆಲೆಯಲ್ಲಿ ಮತ್ತೆ ವಕೀಲ ವೃತ್ತಿ ಆರಂಭಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.