ವಯನಾಡಿನ ಭೂಕುಸಿತ: ಮೃತಪಟ್ಟ ಕನ್ನಡಿಗರಿಗೆ 5 ಲಕ್ಷ ಪರಿಹಾರ – ಸಿಎಂ ಸಿದ್ದರಾಮಯ್ಯ ಘೋಷಣೆ

Date:

 

ನವದೆಹಲಿ: ಕೇರಳದ ವಯನಾಡಿನಲ್ಲಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ದುರಂತದಲ್ಲಿ ಇಲ್ಲಿಯವರೆಗೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಂತ್ರಸ್ತರ ನೆರವಿಗೆ ಅನೇಕ ಜನರು ಮತ್ತು ಸಂಘ ಸಂಸ್ಥೆಗಳು ಮುಂದೆ ಬರುತ್ತಿವೆ. ಈ ನಡುವೆ ಕೇರಳದ ವಯನಾಡು ದುರಂತದಲ್ಲಿ ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ. ಇದೇ ವೇಳೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈಗಾಗಲೇ ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು, ಎನ್.ಡಿ.ಆರ್.ಎಫ್ ತಂಡ ಮತ್ತು ಸೇನಾ ಪಡೆಯ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ರಕ್ಷಣಾ ಕಾರ್ಯದ ಉಸ್ತುವಾರಿಗಾಗಿ ಸಚಿವರಾದ ಸಂತೋಷ್ ಲಾಡ್ ಅವರನ್ನು ವಯನಾಡಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ ತೈಲ ಸಂಸ್ಕರಣಾ ಘಟಕ: ರಿಲಯನ್ಸ್ ಹೂಡಿಕೆ ಘೋಷಿಸಿದ ಟ್ರಂಪ್

ಟೆಕ್ಸಾಸ್‌ನಲ್ಲಿ 300 ಬಿಲಿಯನ್ ಡಾಲರ್ ತೈಲ ಸಂಸ್ಕರಣಾ ಘಟಕ: ರಿಲಯನ್ಸ್ ಹೂಡಿಕೆ...

ಬೇಸಿಗೆಯಲ್ಲಿ ಸೋಂಪು ನೀರು ಕುಡಿಯುವ ಅಭ್ಯಾಸ ಮಾಡಿ: ಸಿಗುವ ಆರೋಗ್ಯ ಲಾಭಗಳು ತಿಳಿದಿರಲಿ

ಬೇಸಿಗೆಯಲ್ಲಿ ಸೋಂಪು ನೀರು ಕುಡಿಯುವ ಅಭ್ಯಾಸ ಮಾಡಿ: ಸಿಗುವ ಆರೋಗ್ಯ ಲಾಭಗಳು...

ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸಮಸ್ಯೆ ಇಲ್ಲ, ಎಲ್‌ಪಿಜಿ ಪೂರೈಕೆ ಶೀಘ್ರ ಆರಂಭ: ಬಸವರಾಜ ಬೊಮ್ಮಾಯಿ

ದೇಶದಲ್ಲಿ ಪೆಟ್ರೋಲ್-ಡೀಸೆಲ್ ಸಮಸ್ಯೆ ಇಲ್ಲ, ಎಲ್‌ಪಿಜಿ ಪೂರೈಕೆ ಶೀಘ್ರ ಆರಂಭ: ಬಸವರಾಜ...

LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50% ಮುಚ್ಚುವ ಭೀತಿ

LPG ಕೊರತೆ ಹೊಡೆತ: ಮುಂಬೈಯಲ್ಲಿ 20% ಹೋಟೆಲ್‌ಗಳು ಬಂದ್, ಇನ್ನೂ 50%...