ವಾಜಪೇಯಿ ಸ್ಮರಣಾರ್ಥ 100 ರೂ ನಾಣ್ಯ ಬಿಡುಗಡೆ ಮಾಡಿದ ಪ್ರಧಾನಿ ಮೋದಿ.. ಹೇಗಿದೆ 100 ರೂ ನಾಣ್ಯ ನೋಡಿ..
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅನಾರೋಗ್ಯದ ಸಮಸ್ಯೆಯಿಂದ ಆಗಸ್ಟ್ 16 ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.. ಹೀಗಾಗೆ ಸೋಮವಾರ ನಡೆದ ಸಂಸತ್ ಭವನದ ಸಮಾರಂಭದಲ್ಲಿ ಅವರ ಸ್ಮರಣಾರ್ಥ 100 ರೂ ಮುಖಬೆಲೆಯ ನಾಣ್ಯವನ್ನ ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಿದ್ದಾರೆ..
ಈ ನಾಣ್ಯದ ತೂಕ 135 ಗ್ರಾಂ… ಒಂದು ಕಡೆ ವಾಜಪೇಯಿ ಅವರ ಭಾವಚಿತ್ರದೊಂದಿಗೆ ಅವರ ಜನನ–ಮರಣ ದಿನಾಂಕವನ್ನ ಬರೆಯಲಾಗಿದೆ.. ಫೋಟೊ ಬದಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಂತ ನಮೂದಿಸಲಾಗಿದೆ.. ಮತ್ತೊಂದು ಕಡೆ ಅಶೋಕ ಸ್ತಂಭದ ಲಾಂಛನ, ಕೆಳಗೆ ಸತ್ಯಮೇವ ಜಯತೆ ಎಂದು ನಮೂದಿಸಲಾಗಿದ್ದು, ದೇವನಾಗರಿ ಮತ್ತು ಇಂಗ್ಲೀಷ್ ನಲ್ಲಿ ಬರೆಯಲಾಗಿದೆ..
ನಾಣ್ಯದ ವಿಶೇಷತೆ ಏನಂದ್ರೆ ಬೆಳ್ಳಿ ಶೇ.50 ರಷ್ಟು, ತಾಮ್ರ ಶೇ.40, ನಿಕ್ಕಲ್ ಶೇ.5 ಮತ್ತು ಜಿಂಕ್ ಶೇ.5 ಜೊತೆಗೆ ಲೋಹವನ್ನ ಬಳಸಿ ಈ ನಾಣ್ಯವನ್ನ ತಯಾರಿಸಲಾಗಿದೆ… ಅಂದಹಾಗೆ ಈ ನಾಷ್ಯ ಬಿಡುಗಡೆಯ ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಪಾಲ್ಗೊಂಡಿದ್ರು..







