ವಾಟ್ಸ್ ಆ್ಯಪ್ ನಲ್ಲಿ ಆನ್ ಲೈನ್ ಇದ್ರೂ ಆಫ್ ಲೈನ್ ತೋರಿಸಬೇಕೆ?

Date:

ಸಾಮಾನ್ಯವಾಗಿ ಒಂದು ಆ್ಯಪ್ ಜನಪ್ರಿಯವಾಗುತ್ತಿದ್ದಂತೆ ಅದರ ಹಿಡನ್ ಡಿಟೇಲ್ಸ್ ಅನಾವರಣ ಗೊಳಿಸಲು ಇತರೆ ಆ್ಯಪ್ ಹುಟ್ಟುಕೊಳ್ಳುತ್ತವೆ. ಇದರಿಂದ ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಕೂಡ ಹೊರತಾಗಿಲ್ಲ. ವಾಟ್ಸ್ಆ್ಯಪ್ ತನ್ನ ಪ್ರೈವಸಿಯನ್ನು ಅದೆಷ್ಟೇ ಗಟ್ಟಿಗೊಳಿಸಿದರೂ ಥರ್ಡ್ ಪಾರ್ಟಿ ಆ್ಯಪ್ಗಳ ಟ್ರಿಕ್ ಬಳಸಿ ಬಳಕೆದಾರರು ಅನೇಕ ವಿಚಾರಗಳನ್ನ ತಿಳಿಯುತ್ತಾರೆ. ಅಲ್ಲದೆ ವಾಟ್ಸ್ಆ್ಯಪ್ ಟ್ರಿಕ್ಗೆಂದೆ ಅದೆಷ್ಟೊ ಆ್ಯಪ್ಗಳು ಈಗ ಹುಟ್ಟುಕೊಂಡಿದೆ. ಅದು ಡಿಲೀಟ್ ಆದ ಮೆಸೇಜ್ಗಳನ್ನು ನೋಡುವುದರಿಂದ ಹಿಡಿದು ನಮ್ಮ ಡಿಪಿ ಯಾರೆಲ್ಲ ವೀಕ್ಷಿಸಿದ್ದಾರೆ ಎಂಬುದರ ವರೆಗೆ ಎನ್ನಬಹುದು.

ವಾಟ್ಸ್ಆ್ಯಪ್ನಲ್ಲಿ ನೀವು ಆನ್ಲೈನ್ ಇದ್ದರೂ ಆಫ್ಲೈನ್ ಕಾಣಿಸುವಂತೆ ಮಾಡಲು ಕೆಲವು ನಿಮಿಷಗಳು ಸಾಕು. ಇದಕ್ಕಾಗಿ ನೀವು ಥರ್ಡ್ಪಾರ್ಟಿ ಆ್ಯಪ್ ಮೊರೆ ಹೋಗಬೇಕು. ಆದರೆ, ನೀವು ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಕೆಲವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು. ಈ ಥರ್ಡ್ ಪಾರ್ಟಿ ಆ್ಯಪ್ ಅಷ್ಟೊಂದು ಸುರಕ್ಷಿತವಾಗಿದ್ದಲ್ಲ. ಯಾಕೆಂದರೆ ಇದು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಡೇಟಾವನ್ನು ತನ್ನ ವಶಕ್ಕೆ ಪಡೆಯಬಹುದು. ಹೀಗಾಗಿ ಈ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ. ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್ಗಳಿಂದ ಮಾತ್ರ ಇದನ್ನ ಡೌನ್ಲೋಡ್ ಮಾಡಿ.

ವಾಟ್ಸ್ಆ್ಯಪ್ ಅನ್ನು ನೀವು ಬಳಕೆ ಮಾಡುತ್ತಿದ್ದಾಗ ಆಫ್ಲೈನ್ ಕಾಣಿಸಲು ಜಿಬಿ ವಾಟ್ಸ್ಆ್ಯಪ್ (GBWhatsApp) ಎಂಬ ಥರ್ಡ್ ಪಾರ್ಟಿ ಆ್ಯಪ್ ಅನ್ನು ಡೌನ್ಲೋಡ್ ಮಾಡಬೇಕು. ಆದರೆ, ಇದು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿಲ್ಲ. ಬದಲಾಗಿ ಬ್ರೌಸರ್ ಮೂಲಕ ನಂಬಿಕೆಯ ಆ್ಯಪ್ ವೆಬ್ಸೈಟ್ಗೆ ತೆರಳಿ ಡೌನ್ಲೋಡ್ ಮಾಡಬೇಕು. ಇತ್ತೀಚೆಗಷ್ಟೆ ಜಿಬಿ ವಾಟ್ಸ್ಆ್ಯಪ್ ತನ್ನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು ಅನೇಕರು ಬಳಸುತ್ತಿದ್ದಾರೆ. ನೀವು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಕ್ರೋಮ್ ಬ್ರೌಸರ್ ಮೂಲಕ ಅಥವಾ ಬೇರೆ ಬ್ರೌಸರ್ ಮೂಲಕ ಡೌನ್ಲೋಡ್ ಮಾಡಿ.

ಜಿಬಿ ವಾಟ್ಸ್ಆ್ಯಪ್ ಅನ್ನು ಡೌನ್ಲೋಡ್ ಆದ ಬಳಿಕ ಇನ್ಸ್ಟಾಲ್ ಮಾಡಿಕೊಳ್ಳಿ. ಇದು ಥೇಟ್ ವಾಟ್ಸ್ಆ್ಯಪ್ ಮಾದರಿಯಲ್ಲೇ ಇರುತ್ತದೆ. ಇನ್ಸ್ಟಾಲ್ ನಂತರ ಓಪನರ್ ಮಾಡಿ ಬಲ ಬದಿಯ ಮೇಲಿರುವ ಮೂರು ಡಾಟ್ ಮೇಲೆ ಒತ್ತಿ. ಅಲ್ಲಿ ಪ್ರೈವಸಿ ಸೆಟ್ಟಿಂಗ್ಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಅನೇಕ ಆಯ್ಕೆಗಳಿದ್ದು, ಕೆಳಗಡೆ ಬಂದರೆ Hide Online Status ಎಂದು ಬರೆದಿರುವುದು ಕಾಣಿಸುತ್ತದೆ. ಇದನ್ನು ಆ್ಯಕ್ಟೀವ್ ಮಾಡಿದರೆ ನೀವು ವಾಟ್ಸ್ಆ್ಯಪ್ನಲ್ಲಿ ಆನ್ಲೈನ್ ಇದ್ದರೂ ಆಫ್ಲೈನ್ ತೋರಿಸುತ್ತದೆ. ಇದರ ಜೊತೆಗೆ ನಿಮ್ಮ ಸ್ನೇಹಿತರು ಕೂಡ ಆನ್ಲೈನಲ್ಲಿದ್ದರೆ ನಿಮಗೆ ಅದು ಗೋಚರಿಸುವುದಿಲ್ಲ. ಆಫ್ಲೈನ್ ಎಂದು ಕಾಣಿಸುತ್ತದೆ.

ಜಿಬಿ ವಾಟ್ಸ್ಆ್ಯಪ್ನಲ್ಲಿ ಮತ್ತೊಂದು ವಿಶೇಷ ಆಯ್ಕೆ ಕೂಡ ಇದೆ. ಸಾಮಾನ್ಯವಾಗಿ ನಿಮ್ಮ ಸ್ನೇಹಿತರ ಸ್ಟೇಟಸ್ ಹೈಡ್ ಆದ ಲಿಸ್ಟ್ನಲ್ಲಿ ನೀವೂ ಇದ್ದರೆ ನಿಮಗೆ ಆ ಸ್ಟೇಟಸ್ ಕಾಣಿಸುವುದಿಲ್ಲ. ಆದರೆ, ಜಿಬಿ ವಾಟ್ಸ್ಆ್ಯಪ್ ಮೂಲಕ ಅವರು ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದ್ದರೆ ಅದನ್ನು ನೋಡಬಹುದು. ಆ್ಯಪ್ ಓಪನರ್ ಮಾಡಿ ಬಲ ಬದಿಯಲ್ಲಿರುವ ಮೂರು ಡಾಟ್ ಮೇಲೆ ಒತ್ತಿ. ಈ ಸಂದರ್ಭ ಕೆಳಗಡೆ ಹೈಡ್ ವೀವ್ ಸ್ಟೇಟಸ್ (Hide View Status) ಎಂಬ ಆಯ್ಕೆ ಕಾಣುತ್ತದೆ. ಇದನ್ನು ಒತ್ತಿದರೆ ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದವರು ಯಾರು?, ಯಾವ ಸ್ಟೇಟಸ್ ಹಾಕಿದ್ದಾರೆ ಎಂಬುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮನ್ನ ಬ್ಲಾಕ್ ಮಾಡಿರುವವರ ಸ್ಟೇಟಸ್ ಕೂಡ ಇದರಲ್ಲಿ ನೋಡಬಹುದು.

ಹಾಗೆಯೇ ನೀವು ನಿಮ್ಮ ಕಾಂಟ್ಯಾಕ್ಟ್ನಲ್ಲಿರುವ ಸ್ನೇಹಿತರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ವೀಕ್ಷಿಸಬಹುದಾಗಿದೆ. ಮೊದಲು ನಿಮ್ಮ ಫೋನ್ನಲ್ಲಿನ ವಾಟ್ಸ್ಆ್ಯಪ್ ಅಪ್ಲಿಕೇಶನ್ಗೆ ಹೋಗಿ ಸೆಟ್ಟಿಂಗ್ ಮೆನು ತೆರೆಯಿರಿ. ನಂತರ ಪ್ರೈವಸಿ ಸೆಟ್ಟಿಂಗ್ ಕೆಳಗೆ ಸ್ಕ್ರಾಲ್ ಮಾಡಿ. ನೀವು ಅಲ್ಲಿ ಕೆಲವು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಸ್ಕ್ರೀನ್ ಕೆಳಭಾಗದಲ್ಲಿರುವ Read receipts ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ. ಅದನ್ನು ಸಕ್ರಿಯಗೊಳಿಸಿದ ನಂತರ, ನಿಮ್ಮ ಕಾಂಟ್ಯಾಕ್ಟ್ನಲ್ಲಿರುವ ಬಳಕೆದಾರರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ನೀವು ವೀಕ್ಷಿಸಿದ್ದಿರಾ ಅಥವಾ ಇಲ್ಲವೇ ಎಂಬುದು ಅವರಿಗೆ ತಿಳಿಯುವುದಿಲ್ಲ.

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...