ವಾರಕ್ಕೂ ಮೊದಲೇ ರೆಕಾರ್ಡ್ ಹುಟ್ಟುಹಾಕಿದ ಯುವರತ್ನ

Date:

ಪುನೀತ್ ರಾಜ್ ಕುಮಾರ್ ಸಿನಿಮಾಗಳು ತೆರೆಗೆ ಬರುತ್ತಿವೆ ಎಂದರೆ ಹಲವಾರು ಹೊಸ ರೆಕಾರ್ಡ್ ಗಳನ್ನ ಸೃಷ್ಟಿ ಮಾಡಿಕೊಂಡೇ ಬರುತ್ತವೆ. ಅತಿ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ತೆರೆಗೆ ಬರಲು 2ವಾರಗಳ ಮುಂದೆಯೇ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಕೊಳ್ಳುವುದು ಕಾಮನ್. ಇದೀಗ ಯುವರತ್ನ ಚಿತ್ರ ತೆರೆಗೆ ಬರುವ ವಾರಕ್ಕೂ ಮುನ್ನವೇ ಹೊಸದೊಂದು ದಾಖಲೆಯನ್ನು ಬರೆದಿದೆ.

 

 

ಹೌದು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಳ್ಳಾರಿಯ ಹೊಸಪೇಟೆಯ 4ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಹೊಸಪೇಟೆಯಲ್ಲಿ ಒಟ್ಟು 4ಚಿತ್ರಮಂದಿರಗಳಿದ್ದು ಎಲ್ಲಾ ಚಿತ್ರಮಂದಿರಗಳಲ್ಲಿಯೂ ಸಹ ಯುವರತ್ನ ತೆರೆಕಾಣಲಿದೆ. ಅದೇ ವಾರ ಹಲವಾರು ತೆಲುಗು ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ಸಹ ಬಾರ್ಡರ್ ಆಗಿರುವ ಹೊಸಪೇಟೆಯಲ್ಲಿ ತೆಲುಗು ಚಿತ್ರವನ್ನ ಬಿಡುಗಡೆ ಮಾಡುತ್ತಿಲ್ಲ.

 

 

 

 

ಈ ಹಿಂದೆ ಕನ್ನಡ ಚಿತ್ರವನ್ನು ನೋಡೋರೆ ಇಲ್ಲದ ಹೊಸಪೇಟೆ ಪಟ್ಟಣದಲ್ಲಿ ತೆಲುಗು ಚಿತ್ರಗಳು ಬಿಡುಗಡೆಯಾಗದ ರೇಂಜಿಗೆ ಆಕ್ರಮಣ ಮಾಡಿಕೊಂಡಿರುವುದು ನಮ್ಮ ನಿಮ್ಮೆಲ್ಲರ ಪವರ್ ಸ್ಟಾರ್. ಹೌದು ಹಿಂದೆ ಹೊಸಪೇಟೆಯಲ್ಲಿ ಅತಿ ಹೆಚ್ಚಾಗಿ ತೆಲುಗು ಚಿತ್ರಗಳನ್ನ ಜನ ನೋಡುತ್ತಿದ್ದರು ಕನ್ನಡ ಚಿತ್ರಗಳಿಗೆ ಅವರು ಸೊಪ್ಪು ಹಾಕುತ್ತಿರಲಿಲ್ಲ, ಆದರೆ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಎಂದರೆ ಅಲ್ಲಿಯ ಜನ ಉಲ್ಟಾ ಪುನೀತ್ ಸಿನಿಮಾಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅದಕ್ಕೆ ದೊಡ್ಮನೆ ಹುಡುಗ 3ಚಿತ್ರಮಂದಿರಗಳಲ್ಲಿ ಬಿಡುಗಡೆಯಾದದ್ದು ಮತ್ತು ಯುವರತ್ನ 4ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಸಾಕ್ಷಿ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌

‌ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌ ಬೆಂಗಳೂರು: ಸಿಲಿಕಾನ್‌...

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ: ಡಿ.ಕೆ. ಶಿವಕುಮಾರ್

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ:...

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್

ಮೆಟ್ರೋ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ಬೆಂಗಳೂರು: ನಗರದ...

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ

ಮೊಳಕೆ ಕಾಳು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಲಾಭ ತಿಳಿಯಿರಿ ಇತ್ತೀಚಿನ ದಿನಗಳಲ್ಲಿ ಆರೋಗ್ಯ...