ವಾಟ್ಸ್ ಆ್ಯಪ್ ನಲ್ಲಿ ಬರುವ ಈ ಮೆಸೇಜ್ ಓಪನ್ ಮಾಡಿದ್ರೆ ಅಷ್ಟೇ!

0
24

ಫೇಸ್ಬುಕ್ ಮಾಲೀಕತ್ವದ ವಾಟ್ಸ್ಆ್ಯಪ್ ಮೆಸೇಜಿಂಗ್ ಅಪ್ಲಿಕೇಷನ್ ಅನ್ನು ಬಳಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತದಲ್ಲೇ ಪ್ರತಿ ತಿಂಗಳು ವಾಟ್ಸ್ಆ್ಯಪ್ ಅನ್ನು 200 ಕೋಟಿಗೂ ಅಧಿಕ ಮಂದಿ ಉಪಯೋಗಿಸುತ್ತಿದ್ದಾರೆ. ಇದೆ ಕಾರಣದಿಂದ ಸೈಬರ್ ಖದೀಮರು ವಂಚನೆ ಎಸಗಲು ಈ ಆ್ಯಪ್ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ ವಾಟ್ಸ್ಆ್ಯಪ್ನಲ್ಲಿ ಸರ್ವೆ ಪೇಜ್ನ ಫೇಕ್ ಮೆಸೇಜ್ ಒಂದು ಹರಿದಾಡುತ್ತಿದ್ದು ಓಪನ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿ ಕಳ್ಳರ ಕೈಸೇರುತ್ತದೆ.

ದೇಶದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ತನ್ನ 30ನೇ ವರ್ಷದ ಸಂಭ್ರಮಾಚರಣೆ ನಡೆಸುತ್ತಿದೆ. ಈ ಸುಲಭ ಪ್ರಶ್ನೆಗೆ ಉತ್ತರಿಸಿದರೆ ನೀವು ಆಕರ್ಷಕ ಉಚಿತ ಉಡುಗೊರೆ ಜೊತೆಗೆ ಹುವೈ ಮೇಟ್ 40 ಪ್ರೋ 5ಜಿ ಸ್ಮಾರ್ಟ್ಫೋನ್ ಗೆಲ್ಲಬಹುದು ಎಂಬ ಸುಳ್ಳು ಸುದ್ದಿ ವಾಟ್ಸ್ಆ್ಯಪ್ನಲ್ಲಿ ವೈರಲ್ ಆಗುತ್ತಿದೆ.

ಈ ಫೇಕ್ ಲಿಂಕ್ ಓಪನ್ ಮಾಡಿದರೆ ಮೊದಲಿಗೆ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ ಎಂಬ ಆಯ್ಕೆ ಬರುತ್ತದೆ. ಇಮ್ಮ ವಯಸ್ಸು, ಜೆಂಡರ್, ನೀವು ಆಂಡ್ರಾಯ್ಡ್ ಅಥವಾ ಐಫೋನ್ ಯಾವುದು ಉಪಯೋಗಿಸುತ್ತಿದ್ದೀರಾ? ಸೇರಿದಂತೆ ಕೆಲವು ಪ್ರಶ್ನೆಗಳಿರುತ್ತವೆ. ನೀವು ಬೇಗನೆ ಉತ್ತರಿಸಬೇಕೆಂದು ಒಂದು ನಿಮಿಷದ ಸಮಯಾವಕಾಶ ನೀಡುತ್ತದೆ. ನೀವು ಸಬ್ಮಿಟ್ ಕೊಟ್ಟರೆ ಆಕರ್ಷಕ ಉಡುಗೊರೆಗಳು ಕಾಣಿಸುತ್ತವೆ. ನಂತರ ಈ ಮೆಸೇಜ್ ಅನ್ನು ವಾಟ್ಸ್ಆ್ಯಪ್ನ 5 ಗ್ರೂಪ್ ಹಾಗೂ 20 ಜನರಿಗೆ ಕಳುಹಿಸಿ ಎಂಬ ಸಂದೇಶ ಬರುತ್ತದೆ. ಹೀಗೆ ಮಾಡಿದರೆ ಅಪಾಯ ಕಟ್ಟಿಟ್ಟಬುತ್ತಿ.

ಇತ್ತೀಚಿಗೆ ಕಳೆದ ಹಲವು ದಿನಗಳಿಂದ ವಾಟ್ಸ್ಆ್ಯಪ್ನಲ್ಲಿ ಈರೀತಿಯ ಅನೇಕ ಸಂದೇಶಗಳು ಹರಿದಾಡುತ್ತಿದೆ. ಬಳಕೆದಾರರನ್ನು ವಂಚಿಸಿ ಅವರ ಬಳಿಯಿಂದ ವೈಯಕ್ತಿಕ ಮಾಹಿತಿಯನ್ನು ಕದಿಯುವುದು ಹಾಗೂ ಅವರಿಗೆ ಹಾನಿಯಾಗುವಂತಹ ತಲುಪಿಸುವ ಉದ್ದೇಶ ವಂಚಕರದ್ದಾಗಿರುತ್ತದೆ. ಇಂಥಹ ಮೆಸೇಜ್ ಓಪನ್ ಮಾಡುವ ಮುನ್ನ ಜಾಗರೂಕರಾಗಿ ಇರಬೇಕು. ಇಂತಹ ಸಂದೇಶಗಳನ್ನು ನೀವು ಕ್ಲಿಕ್ಕಿಸಬೇಡಿ ಮತ್ತು ಇತರರಿಗೂ ಕೂಡ ಅವುಗಳನ್ನು ಫಾರ್ವರ್ಡ್ ಮಾಡಬೇಡಿ. ಇದರಿಂದ ಆನ್ಲೈನ್ ಬ್ಯಾಂಕಿಂಗ್ ವಿವರ ಸೇರಿದಂತೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ವೈಯಕ್ತಿ ಮಾಹಿತಿಯನ್ನೂ ಕದಿಯುತ್ತಾರೆ.

LEAVE A REPLY

Please enter your comment!
Please enter your name here