ವಾಹನ ಚಾಲಕರೇ ಗಮನಿಸಿ.. ಈ ಬಟ್ಟೆ ಹಾಕಿಕೊಂಡು ವಾಹನ ಚಲಾಯಿಸಿದರೆ ಬೀಳುತ್ತೆ ಭಾರೀ ದಂಡ..!

Date:

ಸಂಚಾರಿ ನಿಯಮದ ನೂತನ ದಂಡದ ದರವನ್ನು ನೋಡಿ ಜನ ಜೇಬು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಹೇಗೆ ಬೇಕೆಂದರೆ ಹಾಗೆ ವಾಹನವನ್ನು ಚಲಾಯಿಸುತ್ತಿದ್ದ ಜನ ಎಲ್ಲಾ ಡಾಕ್ಯುಮೆಂಟ್ ಸರಿ ಇದೆಯಾ ಎಂದು ಚೆಕ್ ಮಾಡಿ ತದನಂತರ ಮನೆಯನ್ನು ಬಿಡುವಂತಹ ಪರಿಸ್ಥಿತಿ ಬಂದೊದಗಿದೆ. ಹೌದು ಯಾವುದೇ ಒಂದು ಡಾಕ್ಯುಮೆಂಟ್ ಮಿಸ್ ಆಗಿದ್ದರೂ ಸಹ ಸಾವಿರಾರು ರೂಪಾಯಿ ದಂಡ ತೆರಬೇಕಾಗುತ್ತದೆ ಎಂಬ ಕಾರಣಕ್ಕೆ ಜನ ಎಲ್ಲಾ ಡಾಕ್ಯುಮೆಂಟ್ ಸರಿ ಇದೆಯಾ ಎಂದು ಮರಳಿ ಮರಳಿ ಪರೀಕ್ಷಿಸಿ ತದನಂತರ ವಾಹನವನ್ನು ಚಲಾಯಿಸಲು ಮುಂದಾಗುತ್ತಿದ್ದಾರೆ.

ಇನ್ನು ಇಷ್ಟೆಲ್ಲಾ ಡಾಕುಮೆಂಟ್ ಸರಿಯಿದ್ದರೂ ಸಹ ಲಖನೌನಲ್ಲಿ ಲಾರಿ ಡ್ರೈವರ್ ಒಬ್ಬ 2000 ರೂಪಾಯಿಯ ದೊಡ್ಡ ಮೊತ್ತವನ್ನು ದಂಡವಾಗಿ ಕಟ್ಟಿದ್ದಾನೆ. ಹೌದು ಎಲ್ಲಾ ಡಾಕುಮೆಂಟ್ ಸರಿದರು ಸಹ ಈ ಲಾರಿ ಡ್ರೈವರ್ ಹತ್ತಿರ ಪೊಲೀಸರು ಇಷ್ಟು ದೊಡ್ಡ ಮಟ್ಟದ ಹಣ ಕಟ್ಟಿಸಿಕೊಂಡಿದ್ದ ಕಾರಣ ಆತ ಧರಿಸಿದ್ದ ಬಟ್ಟೆ. ಹೌದು ಭಾರತದ ದೇಸಿ ಬಟ್ಟೆಯಾದ ಲುಂಗಿ ಮತ್ತು ಬನಿಯನ್ ಅನ್ನು ಧರಿಸಿ ಲಾರಿಯನ್ನು ಚಾಲನೆ ಮಾಡುತ್ತಿದ್ದ ಕಾರಣ ಆತನಿಗೆ ಇಷ್ಟು ದೊಡ್ಡ ಮಟ್ಟದ ದಂಡವನ್ನು ಹಾಕಲಾಗಿದೆ. ದ್ವಿಚಕ್ರ ವಾಹನ ಹೊರತುಪಡಿಸಿ ಇನ್ಯಾವುದೇ ವಾಹನವನ್ನು ಓಡಿಸುವ ಚಾಲಕರು ತಪ್ಪದೇ ಖಾಕಿ ಬಟ್ಟೆಯನ್ನು ಧರಿಸಿ ವಾಹನ ಚಾಲನೆ ಮಾಡಬೇಕು ಅದನ್ನು ಬಿಟ್ಟು ಬಣ್ಣ ಬಣ್ಣದ ಬಟ್ಟೆ ಧರಿಸಲು ಆಸೆ ಪಟ್ಟತೆ ಸಾವಿರಾರು ರೂಪಾಯಿ ಕಳೆದುಕೊಳ್ಳುವುದು ಪಕ್ಕಾ..!

Share post:

Subscribe

spot_imgspot_img

Popular

More like this
Related

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ ರೆಡ್ ವೈನ್‌...

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...