ಡಿಕೆ ಶಿವಕುಮಾರ್ ನಾಳೆ ಸ್ಪೀಕರ್ ಮುಂದೆ ವಿಚಾರಣೆಗೆ ಹಾಜರಾಗಿ, ಇಲ್ಲವಾದಲ್ಲಿ ನಿಮ್ಮ ಮೇಲೆ ಸ್ಪೀಕರ್ ಅನರ್ಹತೆಯ ಅಸ್ತ್ರವನ್ನು ಪ್ರಯೋಗಿಸಲಿದ್ದಾರೆ ಎಂದು ಖಡಕ್ ಆಗಿಯೇ ಎಚ್ಚರಿಕೆಯನ್ನು ನೀಡಿದ್ದರು. ಇದು ಎಚ್ಚರಿಕೆಯೆಂದು ಭಾವಿಸಬೇಡಿ. ಇದು ಮನವಿ ಎಂದು ತಿಳಿದು ಸ್ಪೀಕರ್ ಮುಂದೆ ಹಾಜರಾಗಿ ಎಂದು ತಿಳಿಸಿದ್ದರು.
ಆದರೇ ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ 15 ಅತೃಪ್ತ ರಾಜೀನಾಮೆ ನೀಡಿರುವ ಶಾಸಕರು, ಸ್ಪೀಕರ್ ನೀಡಿದ್ದ ನೋಟೀಸ್ ಗೆ, ಪ್ರತಿಕ್ರಿಯಿಸಿರುವ ಅತೃಪ್ತ ರಾಜೀನಾಮೆ ನೀಡಿರುವ ಶಾಸಕರು, ತಮ್ಮ ವಕೀಲರ ಮೂಲಕ ಬಾಲಚಂದ್ರ ಚಾರಕಿಹೊಳಿ ವರ್ಸಸ್ ಬಿಎಸ್ ಯಡಿಯೂರಪ್ಪ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಂತೆ ನಮಗೂ, ವಿಚಾರಣೆಗೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶ ಕೊಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ್ದಾರೆ.